Sep 12: ಬೆಥನಿ ಸಂಸ್ಥೆಯ ಶತಮಾನೋತ್ಸವ ಹಾಗೂ 75ನೇಯ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ವಿದ್ಯಾಕಾಶಿ ಎಂದೇ ಹೆಸರಾದ ಧಾರವಾಡದ ಪ್ರಸಂಟೇಶನ್ ಬಾಲಕಿಯರ ಪ್ರೌಢಶಾಲೆಯಲ್ಲಿ 1993-94ನೇ ಸಾಲಿನ ವಿದ್ಯಾರ್ಥಿನಿಯರಿಂದ ದಿನಾಂಕ 14.08.2022 ರವಿವಾರದಂದು ಅರಿವಿನ ಬೆಳಕನ್ನು ಮೂಡಿಸಿದ ಗುರುವರ್ಯರಿಗೆ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆಗಮಿಸಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜಾಸಿಂತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ನಮಗೆ ಕೊಟ್ಟ ಗೌರವ ತುಂಬಾ ಶ್ಲಾಘನೀಯವಾಗಿದೆ ಪುನಃ ಪುನಃ ಇಂತಹ ಕಾರ್ಯಕ್ರಮಗಳು ಜರುಗುತ್ತಿರಬೇಕೆಂದು ತಿಳಿಸಿದರು. ಕಾರ್ಯಕ್ರಮದ ಸನಿಧ್ಯ ವಹಿಸಿ ಮಾತನಾಡಿದ ಸಿಸ್ಟರ್ ಅರ್ಚನಾ ಮತ್ತು ಸಿಸ್ಟರ್ ನಿವೇದಿತಾ ಅವರು ವಿದ್ಯಾರ್ಥಿಗಳ ಜೀವನ ಸುಖಕರವಾಗಿರಲೆಂದು ಹಾರೈಸಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಎನ್.ಕೆ. ಕುಲಕರ್ಣಿ, ವಿಜ್ಞಾನ ಗುರುಗಳು ಮಾತನಾಡುತ್ತಾ ವಿದ್ಯಾರ್ಥಿಗಳ ಅಧಮ್ಯ ಪ್ರೀತಿ ಮತ್ತು ಶಿಕ್ಷಕರ ಅವಿನಾಭಾವ ಸಂಬಂಧ ತುಂಬಾ ಅರ್ಥಪೂರ್ಣ ಹಾಗೂ ನನಗೆ ಹೆಮ್ಮೆಯ ವಿಷಯ ಎಂದರು ವೇದಿಕೆಯ ಮೇಲೆ ಆಸೀನರಾಗಿದ್ದ ಕನ್ನಡ ಗುರುಗಳಾದ ಕೆ.ಎನ್.ಹಬ್ಬು ಅವರು ಮಾತನಾಡುತ್ತಾ 28 ವರ್ಷಗಳ ಸುದೀರ್ಘ ಪಯಣದ ನಂತರ ವಿದ್ಯಾರ್ಥಿಗಳನ್ನು ನೋಡಿ ಮದುವೆ ಮನೆಗೆ ಬಂದಂತಾಯಿತು. ಅಲ್ಲದೇ ಎಲ್ಲ ಹೆಣ್ಣು ಮಕ್ಕಳನ್ನು ಅಕ್ಕರೆಯಿಂದ ನೋಡುವ ಬೆಥನಿ ಸಂಸ್ಥೆಯನ್ನು ಕೊಂಡಾಡಿದರು. ಇನ್ನೊರ್ವ ಶಿಕ್ಷಕರಾದ ದೊಡ್ಡಯ್ಯ ಸರ್ ಮಾತನಾಡುತ್ತ ಗುರುವಂದನೆ ಒಂದು ಸ್ತುತ್ಯಾರ್ಹ ಕಾರ್ಯಕ್ರಮ. ನಿಮ್ಮ ತಂದೆ ತಾಯಿ ನೀಡಿದ ಸಂಸ್ಕಾರ ಪ್ರೀತಿ ವಿಶ್ವಾಸಕ್ಕೆ ನಾವೆಂದು ಚಿರ ಋಣಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಿಸ್ಟರ್ ಸೆವರಿನ್ ಗುರುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಕೃತಜ್ಞತೆ ಎನ್ನುವುದು ತುಂಬಾ ದೊಡ್ಡದೆಂದು ಹೇಳಿದರು.

ಶ್ರೀಮತಿ ಮೇರಿ ಶಿಕ್ಷಕಿಯರು ಆಡಿಯೋ ಮೂಲಕ ಮಾತನಾಡಿ ಈ ಶಾಲೆ ನನ್ನ ತವರು ಎಂಬ ಅಭಿಮಾನ ವ್ಯಕ್ತಪಡಿಸಿದರು. ಹಳೆಯ ವಿದ್ಯಾರ್ಥಿನಿಯರಾದ ಶ್ರೀಮತಿ ಸುಧಾ ಕುಲಕರ್ಣಿ, ಡಾ. ಮಂಜುಳಾ ಭಂಡಾರಿ ತಾವು ಕಲಿತ ಶಾಲೆಯ ಹಳೆಯ ದಿನಗಳನ್ನು ಮೆಲುಕು ಹಾಕಿದರು. ತಮ್ಮ ಅನಿಸಿಕೆಗಳನ್ನು ಪೂರ್ಣ ಮನಸ್ಸಿನಿಂದ ಹಂಚಿಕೊಂಡರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ಅಂದಾನಮ್ಮ ಬೆಂಡಿಗೇರಿ ಅವರು ತಮ್ಮ ಸ್ವರಚಿತ ಕವನದ ಮುಖೇನ ಗುರುಗಳಿಗೆ ವಂದಿಸಿ ಈ ಕಾರ್ಯಕ್ರಮದ ರೂಪುರೇಖೆಗಳನ್ನು ವಿವರಿಸಿದರು. ಶ್ರೀಮತಿ ಸ್ವಪ್ನಾ ಪವಾರ ಕಾರ್ಯಕ್ರಮವನ್ನು ನಿರೂಪಿಸಿದರು. 28 ವರ್ಷಗಳ ನಂತರ ಭೇಟಿಯಾದ ಈ ಸುಸಂದರ್ಭ ಎಲ್ಲರಿಗೂ ಮತ್ತೊಮ್ಮೆ ಹಳೆಯ ನೆನಪುಗಳು ಮರುಕಳಿಸಿತು. ಪ್ರೀತಿ, ಅಪ್ಯಾಯಮಾನತೆ ಸಂಭ್ರಮದ ಸಡಗರದ ವಾತಾವರಣವು ಕಾರ್ಯಕ್ರಮದಲ್ಲಿ ಎದ್ದು ಕಾಣುತಿತ್ತು.

 

ಸಿಸ್ಟರ್ ಜಸಿ0ತಾ ರೊಡ್ರಿಗಸ್, ಸ0ಚಾಲಕಿ,
ಪ್ರಜ0ಟೇಶನ್ ಬಾಲಕಿಯರ ಪ್ರೌಢಶಾಲೆ, ಧಾರವಾಡ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]