ನಿಜ ಹೇಳು ಯಾರು ನೀನು?

ದೈವ ಸೃಷ್ಟಿಯೋ, ಮಾನವ ನಿರ್ಮಿತವೋ, ಮಾಯಾ ಜೀವಿಯೋ, ಒಂದು ಗೊತ್ತಿಲ್ಲ. ಆದರೆ ನಡುಗಿ ಹೋಯಿತ್ತಲ್ಲ ಭೂಲೋಕ. ಪ್ರಪಂಚವನ್ನೇ ತನ್ನ ಕಿಸೆಯಲ್ಲಿಟ್ಟು ಮಾನವೀಯತೆಯನ್ನು ಮರತೇ ಹೋಗಿದ್ದ     ನಾವಿಂದು ಒಂದು ವೈರಸ್‍ಗೆ ಭಯಪಟ್ಟು ಮನೆಯೊಳಗೆ ಅಡಗಿ ಕುಳಿತ್ತಿದ್ದೇವಲ್ಲ. ಮಂದಿರ, ಮಸೀದಿ, ಚರ್ಚಗಳೆಲ್ಲಾ ಬಾಗಿಲು ಮುಚ್ಚಿದ್ದವು.ಯಾಕೆ? ನಿಮ್ಮೊಳಗೇ ದೇವರಿದ್ದಾನೆ ಹುಡುಕಿಕೊಳ್ಳಿ ಎಂಬ ಸಂದೇಶ ಸಾರಲು.  ಒಂದು ತುತ್ತಿಗೂ ಕಷ್ಟಪಡುತ್ತಿದ್ದಾಗ ಯಾರೋ ಕೊಟ್ಟ ಅನ್ನವನ್ನು ಗಬಗಬನೆ ತಿಂದು ಹೊಟ್ಟೆ ತುಂಬಿಸಿಕೊಂಡೆವಲ್ಲ. ಹಸಿದ ಹೊಟ್ಟೆ ಕೇಳಲಿಲ್ಲ ಇದು ಯಾರ ಅಡುಗೆಮನೆಯಲ್ಲಿ ತಯಾರಾಗಿದೆ, ತಯಾರಿಸಿದವರ ಜಾತಿ, ಕುಲ, ಧರ್ಮ ಯಾವುದೆಂದು. ಮದುವೆ ಮನೆಗಳಲ್ಲಿ ನಮ್ಮ ಹೊಟ್ಟೆ ತುಂಬಿಸುವುದಕ್ಕಿಂತ ಕಸದತೊಟ್ಟಿ ( ಡಸ್ಟ್ ಬಿನ್)ಗಳನ್ನು ತುಂಬಿಸುತ್ತಿದ್ದೆವು.  ಇಂದು ತುತ್ತು ಅನ್ನ ಕೂಡ ಬಿಡುತ್ತಿಲ್ಲ. ಅನ್ನದ ಬೆಲೆ ಏನೆಂದು ಅರ್ಥ ಮಾಡಿಸಿದೆಯಲ್ಲ. ತಾಯಿ ನೆಲವನ್ನು ಬಿಟ್ಟು ಹೋಗಿದ್ದ ಕರಳಕುಡಿಗಳು ಓಡೋಡಿ ಬಂದು ತಾಯಗೂಡನ್ನು ಸೇರಿವೆಯಲ್ಲ.  ಯಾರು ಕಲಿಸಿಕೊಟ್ಟರು ಸಂಬಂಧಗಳ ಮೌಲ್ಯಗಳನ್ನು. ತನ್ನವರಿಗಾಗಿ ಸಮಯವಿರಲಿಲ್ಲ ಇಂದು ಸಮಯವೇ ಹೋಗುತ್ತಿಲ್ಲವೆಂದೆನಿಸುತ್ತಿದೆಯಲ್ಲ.  ಫ್ಯಾಷನ್, ಬಟ್ಟೆಬರೆ, ಪಾರ್ಟಿ, ಪ್ರವಾಸ ಯಾವುದೂ ಬೇಡವಾಗಿ ಇರುವುದರಲ್ಲೇ ಅನುಸರಿಸಿಕೊಂಡು ಬದುಕುತ್ತಿದ್ದೇವಲ್ಲ.  ನಡೆದುಬಂದ ಹಾದಿಗೆ ಹಿಂದಿರುಗಿ ಅರ್ಧದಾರಿ ದಾರಿ ಕ್ರಮಿಸಿ ಬಿಟ್ಟದ್ದೇವಲ್ಲ. ಇದೆಲ್ಲಾ ಹೇಗೆ ಸಾಧ್ಯವಾಯಿತು?.  ಯಾವ ಶಾಲೆಯಿಂದಲೂ ಕಲಿಯದ ಜೀವನ ಪಾಠವನ್ನು ನೀನು ಕಲಿಸಿ ಬಿಟ್ಟೆಯಲ್ಲಾ. ಮಾನವೀಯತೆ ಮೌನವಾಗಿ ಮರಳುವಂತೆ ಮಾಡಿದೆಯಲ್ಲಾ. ನನ್ನ ಮನಸ್ಸಿನಲ್ಲಿ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ನಿಜ ಹೇಳು ಕರೋನಾ ಯಾರು ನೀನು?

 

 

 

 

 

 

 

 

gÁåQä ¥Àæ«Ãuï JA. F, ¸ÀºÀ ²PÀëQ

¸ÀAvÀ CAvÉÆÃt »jAiÀÄ ¥ÁæxÀ«ÄPÀ ±Á¯É

¥ÉÆ£ÀßA¥ÉÃmÉ, zÀ PÉÆqÀUÀÄ.

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]