Sep 21 : ಬೆಳಗಾವಿಯ ಸಂತಿಬಸ್ತವಾಡದಲ್ಲಿನ ಸಂತ ಜೋಸೆಫರ ಆರ್ಫನೇಜ್ ಪ್ರೌಢ ಶಾಲೆಯಲ್ಲಿ ಸಪ್ಟೆಂಬರ 18ನೆಯ ತಾರೀಕಿನಂದು ಭಾರತ ರತ್ನ ಸರ್ ಎಮ್. ವಿಶ್ವೇಶ್ವರಯ್ಯರವರ 158ನೇ ಜನ್ಮದಿನದ ಆಚರಣೆಯನ್ನು ಹಾಗೂ ಪಠ್ಯ ಚಟುವಟಿಕೆಗಳ ಭಾಗವಾದ ಗಣಿತ ಸಂಘದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲವೀನಾ ಬಿಎಸ್‍ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕನ್ನಡ ಶಿಕ್ಷಕ ಶ್ರೀಯುತ ದಯಾನಂದ ಆರ್ ಹೆಚ್‍ರವರು ಸರ್ ಎಮ್. ವಿಶ್ವೇಶ್ವರಯ್ಯರವರ ಜೀವನ ಪರಿಚಯದ ಬಗ್ಗೆ ಉಪನ್ಯಾಸ ನೀಡಿದರು. ಸಾಂಕೇತಿಕವಾಗಿ ಗಣಿತ ಸಂಘದ ಶುಭಾರಂಭವನ್ನು ಮಾಡಲಾಯಿತು. ಅದೇ ಸಂದರ್ಭದಲ್ಲಿ ಈ ಎರಡೂ ಕಾರ್ಯಕ್ರಮಗಳ ಕುರಿತಾದ ವಿಡಿಯೋ ದೃಶ್ಯಾವಳಿಗಳನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಲಾಯಿತು. ಶಾಲಾ ಗಣಿತ ಸಂಘದ ಮೇಲ್ವಿಚಾರಕರಾದ ಶ್ರೀ. ಸೆಬೆಸ್ಟಿನ್ ಗೊನ್ಸಾಲ್ವಿಸ್‍ರವರು ಈ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀಮತಿ, ಲಕ್ಷ್ಮೀ ಟೀಚರ್‍ರವರು ಸ್ವಾಗತಿಸಿ ವಂದಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಶ್ರೀ. ಸೆಬೆಸ್ಟಿನ್ ಗೊನ್ಸಾಲ್ವಿಸ್, ಸಹ ಶಿಕ್ಷಕರು
ಸಂತ ಜೋಸೆಫರ ಆರ್ಫನೇಜ್ ಪ್ರೌಢ ಶಾಲೆ, ಸಂತಿಬಸ್ತವಾಡ, ಬೆಳಗಾವಿ