Dec 10: “ಗುರುಗಳ ಸೇವಾ ಬದುಕು, ಮಕ್ಕಳ ಗುಣ್ಮಾತಕ ಬದುಕಿಗೆ ಆದರ್ಶ; ಅದನ್ನು ಅನುಸರಿಸಿ ಶಾಲಾ ಬದುಕಿನಲ್ಲೆ ಉತ್ತಮ ವಿದ್ಯಾರ್ಥಿಗಳಾಗಿ ಕಲಿಕೆಯನ್ನು ರೂಢಿಸಿಕೊಲ್ಳುವಂಥಾಗಬೇಕು” ಎಂದು ಭಗಿನಿ ಸಿಸ್ಟರ್ ಲಿಲ್ಲಿ ಆಂಜ್ ಬಿ. ಎಸ್. ರವರು ಸಂತ ಪೌಲರ ಪ್ರೌಢಶಾಲೆ, ಬಳಕುಂಜೆಯ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷೀಯ ಸಂದೇಶವಿತ್ತರು.
ಅತಿಥಿಗಳಾಗಿ ಉಪಸ್ಥಿತರಿದಗದ ಪುನರೂರು ಪ್ರತಿಷ್ಠಾನ(ರಿ) ಅಧ್ಯಕ್ಷರಾದ ಶ್ರೀ ದೇವಪ್ರಸಾದ ಪುನರೂರುರವರು ಗ್ರಾಮೀಣ ಪ್ರದೇಶದಲ್ಲೂ, ವಿದ್ಯಾರ್ಥಿಗಳ ಪ್ರತಿಭೆಯನ್ನು ಕಂಡಾಗ ಸಂತಸವಾಗುತ್ತದೆ ಎಂದು ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಶೈಕ್ಷಣಿಕ ಸಾಲಿನ ಸಾಂಸ್ಕ್ರತಿಕ ಸಾಧಕರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಸ್ಥಳೀಯ ಪ್ರೊವಿಡೆನ್ಸ್ ಕಾನ್ವೆಂಟಿನ ಸುಪೀರಿಯರ್ ಭಗಿನಿ ಸಿಸ್ಟರ್ ಜೆನಿಟಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಲಿಯೊ ಲೊಯ್ಡ್ ಡಿಸೋಜರವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ್ ರವರು ಸ್ವಾಗತಿಸಿದರು. ಶಿಕ್ಷಕಿ ಆ್ಯಡಿ ಜೋಲಿ ಡಿಸೋಜ ರವರು ವಂದಿಸಿದರು. ಕಾರ್ಯಕ್ರಮದಲ್ಲಿ “ದೇವರ ಸೇವಕ ಗುರು ರೇಮಂಡ್” ನೃತ್ಯ-ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು ಅಲ್ಲದೆ ಇತರೆ ಸಾಂಸ್ಕ್ರತಿಕ ರಸದೌತಣವನ್ನು ನೀಡಿದರು. ಶಿಕ್ಷಕ ಪ್ರವೀಣ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.
Sr Paulette BS, Headmistress
St Paul’s High School, Balkunje