Nov 18: ಪ್ರತಿವರ್ಷದಂತೆ ಈ ವರ್ಷವು ಕೂಡಾ ನವೆಂಬರ್ 14ರಂದು ಬೆಥನಿ ಪ್ರೌಢ ಶಾಲೆ, ಚಿತ್ತಾಪೂರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗಿತ್ತು. ಈ ವಿಶೇಷ ಶಾಲೆಯಲ್ಲಿ ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ದಿನದ ಅಧ್ಯಕ್ಷ ಸ್ಥಾನವನ್ನು ನಮ್ಮ ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಸಿಸ್ಟರ್ ಕವಿತಾ ಬಿ ಎಸ್ ರವರು ವಹಿಸಿದ್ದರು. ಮತ್ತು ಮುಖ್ಯ ಅತಿಥಿ ಸ್ಥಾನವನ್ನು ಶಾಲೆಯ ಹಿರಿಯ ಶಿಕ್ಷಕರಾದ ಸಿಸ್ಟರ್ ನೀನಾರವರು ವಹಿಸಿದ್ದರು ಹಾಗೂ ಎಲ್ಲಾ ಮಕ್ಕಳ ಪರವಾಗಿ ಶಾಲೆಯ ಮುಖ್ಯಮಂತ್ರಿಯಾದ ಲಕ್ಷ್ಮೀಕಾಂತ ಮತ್ತು ಶಾಂಭವಿ ಅತಿಥಿ ಸ್ಥಾನವನ್ನು ವಹಿಸಿದ್ದರು.
ಮೊದಲಿಗೆ ಕಾರ್ಯಕ್ರಮ ಪ್ರಾರ್ಥನೆಯ ಪ್ರಾರಂಭವಾಯಿತು. ನಂತರ ದೀಪ ಬೆಳಗುವುದರ ಮೂಲಕ ಮತ್ತು ನೆಹರುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ತದನಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು. ಈ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ನಮ್ಮೆಲ್ಲಾ ಶಿಕ್ಷಕರು ಅತಿ ಉತ್ಸಾಹದಿಂದ ಭಾಗಿಯಾದರು. ಪ್ರತಿಯೊಬ್ಬ ಶಿಕ್ಷಕರು ಕೂಡ ಉತ್ಸಾಹದಿಂದ ನೃತ್ಯವನ್ನು ಮಾಡಿ ಮಕ್ಕಳನ್ನು ರಂಜಿಸಿದರು.
ಒಟ್ಟಾರೆಯಾಗಿ ಶಿಕ್ಷಕರೆಲ್ಲಾರೂ ಮಕ್ಕಳಿಗೋಸ್ಕರ ಆಯೋಜಿಸಿದ್ದ ಈ ಕಾರ್ಯಕ್ರಮವು ತುಂಬಾ ಚೆನ್ನಾಗಿ ಯಾವುದೇ ಕೊರತೆಯಾಗದಂತೆ ಮೂಡಿಬಂದಿತು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯನಿರವರು ನಮ್ಮೆಲ್ಲಾ ಶಿಕ್ಷಕರಿಗೂ ಬೆನ್ನಹಿಂದೆ ಮಾರ್ಗದರ್ಶಕರಾಗಿ ನಿಂತು ಕಾರ್ಯಕ್ರಮದ ಕುರಿತು ಎಲ್ಲಾ ಮಾಹಿತಿಯನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕಾರ್ಯಕ್ರಮದ ನಂತರ ಮಕ್ಕಳಿಗೋಸ್ಕರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಕ್ಕಳೆಲ್ಲರೂ ತುಂಬಾ ಖುಷಿಯಿಂದ ಭೋಜನವನ್ನು ಸವಿದು ಅಷ್ಟೇ ಖುಷಿಯಿಂದ ಮನೆಗೆ ವಾಪಾಸಾದರೂ.
ಕುಮಾರಿ ಆಶಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ