June 17: ದೇವರ ಸೃಷ್ಟಿಯಾಗಿರುವ ಮಾನವನ ಜೀವನದ ಆಧಾರವೆಂದರೆ ಅವನ ಉಸಿರು, ಆ ಉಸಿರಿಗೆ ಆಸರೆಯಾಗಿರುವುದು ಪರಿಸರ. ಅಂತಹ ಜೀವನದ ಜೀವನಾಡಿಯಾಗಿರುವ ಪರಿಸರದ ದಿನಾಚರಣೆಯನ್ನು ಬೆಥನಿ ಪ್ರೌಢ ಶಾಲೆ ಹಾಗೂ ಶಿಶುವಿಹಾರ ಪ್ರಾಥಮಿಕ ಶಾಲೆ, ಚಿತ್ತಾಪುರ ಜೊತೆ ಸೇರಿ ದಿನಾಂಕ .13.06.2020ರ ಶನಿವಾರದಂದು ಆಚರಣೆ ಮಾಡಲಾಯಿತು.
ಪರಿಸರದ ಪ್ರಾಮುಖ್ಯತೆಯನ್ನು, ಮಹತ್ವವನ್ನು, ಅದರ ಉಳಿವಿಕೆಯನ್ನು ಭಾಷಣದ ಮೂಲಕ, ಹಾಡಿನ ಮೂಲಕ ಹೇಳುವುದರಿಂದ ಪ್ರಾರಂಭಿಸಿ, ಶಾಲೆಯ ಆವರಣದಲ್ಲಿ ಸುಮಾರು 10 ರಿಂದ 15 ಸಸಿಗಳನ್ನು ನೆಡುವುದರ ಮೂಲಕ ವಿಜೃಂಭಣೆಯಾಗಿ ಈ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಅದಕ್ಕೊಂದು ಅರ್ಥ ಬರುವಂತೆ ಮಾಡಲಾಯಿತು.
ಸಿಸ್ಟರ್ ಕವಿತಾ, ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ