ದಿನಾಂಕ: 18.01.2021ರಂದು ಗುಲಬರ್ಗಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಫೂಜ್ಯ ಡಾ. ರಾಬರ್ಟ ಮೈಕಲ್ ಮಿರಾಂದರವರು ಪಾಲನಾ ಭೇಟಿ ಪ್ರಯುಕ್ತ ನಮ್ಮ ಶಾಲೆಗೆ ಭೇಟಿ ನೀಡಿದರು. ಅವರಿಗೆ ಶಿಶುವಿಹಾರ ಹಿರಿಯ ಪ್ರಾಥಮಿಕ ಹಾಗೂ ಬೆಥನಿ ಪ್ರೌಢ ಶಾಲೆಯ ಎಲ್ಲ ಸಿಬ್ಬಂದಿಯವರು ಒಟ್ಟುಗೂಡಿ ಬಹು ವಿಜೃಂಭಣೆಯಿಂದ ಸ್ವಾಗತಿಸಿದರು. ಪ್ರಾರ್ಥನಾ ಕೂಟದ ಮೂಲಕ ದೇವರಲ್ಲಿ ಪ್ರಾರ್ಥಿಸಲಾಯಿತು. ಶಿಶುವಿಹಾರ ಶಾಲೆಯ ಸಹಶಿಕ್ಷಕಿ ಶ್ರೀಮತಿ ಶೀತಲ ಅತಿಥಿಗಣ್ಯರನ್ನು ಸ್ವಾಗತಿಸಿದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಿಶುವಿಹಾರ ಶಾಲೆಯ ಶಿಕ್ಷಕರು ರೂಪಕದ ಮೂಲಕ ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು. ಪರಮ ಫೂಜ್ಯ ಡಾ. ರಾಬರ್ಟ ಮೈಕಲ್ ಮಿರಾಂದರವರು ತಮ್ಮ ಆಶೀರ್ವಚನಗಳಲ್ಲಿ ತಮ್ಮ ಪಾಲನಾ ಭೇಟಿಯ ಬಗ್ಗೆ ತಿಳಿಸುತ್ತ ಕರೋನಾದಿಂದಾದ ಲಾಭ-ನಷ್ಟಗಳನ್ನು ತಿಳಿಸಿದರು. ಮಕ್ಕಳಿಗೆ ಪುಸ್ತಕದ ಜೊತೆ ಮೌಲ್ಯಯುತವಾದ ಶಿಕ್ಷಣ ನೀಡಬೇಕು, ಜೊತೆಗೆ ದೇವರ ಬಗ್ಗೆ ಭಯ ಇರುವ ಹಾಗೆ ಶಿಕ್ಷಕರು ಜವಾಬ್ದಾರಿ ವಹಿಸಬೇಕೆಂದು ಸೂಕ್ಷ್ಮವಾಗಿ ವಿವರಿಸಿ ಹೇಳಿದರು. ಎಲ್ಲಾ ಶಿಕ್ಷಕರಿಗೆ ಪ್ರಾರ್ಥನೆ ಮೂಲಕ ಆಶೀರ್ವಚನ ನೀಡಿದರು. ಕೊನೆಗೆ ಬೆಥನಿ ಶಾಲೆಯ ಸಹಶಿಕ್ಷಕಿ ಶ್ರೀಮತಿ ಸುಷ್ಮಾರವರ ವಂದನಾರ್ಪಣೆ ಮೂಲಕ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.
ಸಿ.ಕವಿತಾ ಬಿ.ಎಸ್, ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ