ಭೆಥನಿ ಸಂಸ್ಥೆಯ ಸಂಸ್ಥಾಪಕರಾದ ದೇವರ ಸೇವಕ ಅತೀ ವಂ. ಫಾದರ್. ರೈಮಂಡ್ ಕಾಮಿಲಸ್ ಮಸ್ಕರೇನ್ಹಸ್‍ರವರು ಹೆಣ್ಣು ಮಕ್ಕಳ ಉದ್ದಾರಕ್ಕಾಗಿ 1945 ರಂದು ಈ ಸಂಸ್ಥೆಯನ್ನು ಸ್ಥಾಪಿಸಲ್ಪಟ್ಟ ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಅಮೃತ ಮಹೋತ್ಸವದ ಸಂಭ್ರಮವನ್ನು ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೇರವೇರಿಸಲಾಯಿತು.

ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ದಿನಾಂಕ 04.02.2021 ಧನ್ಯತಾ ಭಾವದ ಕೃತಜ್ಞಾತ ದಿವ್ಯ ಬಲಿಪೂಜೆಯನ್ನು ರೋಸಾ ಮಿಸ್ತಿಕ ಕನ್ಯಾಮಠದ ಪ್ರಾರ್ಥನ ಮಂದಿರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಮೊನ್ಸಿಂಜೊರ್ ವಂ. ಫಾ.ಮಾಕ್ಸಿಮ್ ನೊರೊನ್ಹಾರ ಆಶೀರ್ವಚನದೊಂದಿಗೆ ದಿವ್ಯ ಬಲಿಪೂಜೆ ನಡೆಯಿತು. ಸಹಾಯಕ ಗುರುಗಳಾಗಿ ಸ್ನೇಹಸದನದ ನಿರ್ದೇಶಕರಾದ ವಂ. ಫಾ. ತೇಜಿ ಇವರ ಸಹಭಾಗಿತ್ವದಲ್ಲಿ ನೆರವೇರಿತು. ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ವಂ. ಭಗಿನಿ ಮಾರಿಯೆಟ್ , ಬೆಥನಿ ಮಂಗಳೂರು ಪ್ರಾಂತ್ಯಾದ ಪ್ರಾಂತ್ಯಾಧಿಕಾರಿಣಿ ವಂ. ಭಗಿನಿ ಸಿಸಿಲ್ಯಾ ಮೆಂಡೊನ್ಸ  ಬೆಥನಿ ಮಂಗಳೂರು ಪ್ರಾಂತ್ಯಾದ ಶಿಕ್ಷಣ ಸಂಯೋಜಕಿ ವಂ. ಭಗಿನಿ ಶುಭ , ಹಾಗೂ ಬೆಥನಿ ವಿದ್ಯಾಸಂಸ್ಥೆಯ ಖಜಾಂಚಿ ಭಗಿನಿ ರೋಸ್‍ಲಿಟ ಮತ್ತು ಕನ್ಯಾ ಮಠದ ಎಲ್ಲ ಭಗಿನಿಯರು ಎಲ್ಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಸಂಸ್ಥೆಯ ಪ್ರಸ್ತುತ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಶಿಕ್ಷಣಾರ್ಥಿಗಳು ಬಲಿಪೂಜೆಯಲ್ಲಿ ಭಾಗವಹಿಸಿ ಕೃತಜ್ಞತೆಗಳನ್ನು ಅರ್ಪಿಸಿದರು.

ದಿನಾಂಕ 05.02.2021ರ ಶುಕ್ರವಾರದಂದು ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮವು ಪ್ರಾರ್ಥನ ನೃತ್ಯದ ಮೂಲಕ ಪ್ರಾರಂಭವಾಯಿತು. ಸಂಸ್ಥೆಯ ಸ್ಥಾಪಕ ಮತ್ತು ರೋಸಾ ಮಿಸ್ತಿಕ ಮಾತೆಯನ್ನು ನೆನೆಸಿ ಸ್ವಾಗತ ನೃತ್ಯ ಮಾಡಲಾಯಿತು. ಬೆಥನಿ ಸಂಸ್ಥೆಯ ಮಾಹಾಮಾತೆ ವಂ. ಭಗಿನಿ ರೋಸ್ ಸೆಲಿನ್‍ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಸಂಸ್ಥಾಪಕರ ಕನಸನ್ನು  ನನಸಾಗಿಸುವಲ್ಲಿ ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯು ಯಶಸ್ಸಿಯಾಗಿದೆ ಎಂದು ಹೇಳಿದರು.

ಅತಿಥಿಗಳಾದ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ವಂ. ಭಗಿನಿ ಸಿಸಿಲ್ಯಾ ಮೆಂಡೊನ್ಸ  ರವರು ಶಿಕ್ಷಕಿ ವೃತ್ತಿ  ಪವಿತ್ರ ವೃತ್ತಿ ಎಂದು ಮನಮುಟ್ಟುವಂತೆ ತಿಳಿಸಿದರು. ಅಮೃತ ಸಂಭ್ರಮದ ಸಂಚಿಕೆ, “ಸುಹಾಸಿನಿ”ಯನ್ನು ಪೊಂಪೈ ಚರ್ಚ್‍ನ ಧರ್ಮಗುರುಗಳಾದ ವಂ.ಫಾ. ಆಂಟನಿ ಲೋಬೊ ಇವರು ಅನಾವರಣಗೊಳಿಸಿ ಮೌಲ್ಯಭರಿತ ಶಿಕ್ಷಕರನ್ನು ರೂಪಿಸುವ ಜವಬ್ದಾರಿ ಹೊತ್ತ ಈ ಸಂಸ್ಥೆ ಇನ್ನು ಹೆಚ್ಚಿನ ಯಶಸ್ಸನ್ನು ಕಾಣಾಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಲವೀನ ಲೋಬೊರವರು 75 ವರ್ಷಗಳ ಸಚಿತ್ರ ವರದಿಯನ್ನು ಮಂಡಿಸಿದರು. ಬೆಥನಿ ಸಂಸ್ಥೆಯ ಮಾಹಾಮಾತೆ ಹಾಗೂ ಬೆಥನಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ವಂ. ಭಗಿನಿ ರೋಸ್ ಸೆಲಿನ್, ಸಂಸ್ಥೆಯ  ಪ್ರಾಂಶುಪಾಲರಾದ ಶ್ರೀಮತಿ ಲವೀನ ಲೋಬೊ, ಸಂಸ್ಥೆಯ ನಿವೃತ್ತ ಪ್ರಾಂಶುಪಾಲರನ್ನು ಮತ್ತುಉಪನ್ಯಾಸಕರನ್ನು ಹಾಗೂ ಹಳೆ ವಿದ್ಯಾರ್ಥಿ ಶ್ರೀಮತಿ ಸುಲೋಚನ ಭಟ್ ಇವರುಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ ಜಾಸ್ಮಿನ್ ಮೊರಾಸ್‍ರವರು  ಸನ್ಮಾನಿತರ ಕಿರು ಪರಿಚಯ ನೀಡಿದರು. ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ ವೀಣಾ ಬೆನ್ನಿಸ್ ರವರು ಧನ್ಯವಾದ ಸಮರ್ಪಣೆಯನ್ನು ಗೈದರು. ಉಪನ್ಯಾಸಕಾರದ ಶ್ರೀಯುತ ರೋನಾಲ್ಡ್ ಕಾರ್ಲೊ ಇವರು ಕಾರ್ಯಕ್ರವನ್ನು ನಿರ್ವಹಿಸಿದರು.
 

 

 

 

 

 

 

 

 

 

 

 

 

 

 

ಶ್ರೀಮತಿ ಲವೀನ ಲೋಬೊ, ಪ್ರಾಂಶುಪಾಲರು
ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆ, ಕಿನ್ನಿಕಂಬಳ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]