Oct 30: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಮೇರೆಗೆ ದಿನಾಂಕ 28/10/2021ರಂದು ಮಾನ್ಯ ಶ್ರೀ ಉಮಾಕಾಂತ ಹಳ್ಳೆ (ತಹಸಿಲ್ದಾರರು) ತಾಲ್ಲೂಕ ದಂಡಾಧಿಕಾರಿಗಳು ಚಿತ್ತಾಪೂರ, ಮಾನ್ಯ ಶ್ರೀ ಸಿದ್ಧವೀರಯ್ಯ ರುದ್ನೂರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ, ಮಾನ್ಯ ಶ್ರೀಮತಿ ನೀಲಗಂಗಾ ಬಬಲಾದ ತಾಲ್ಲೂಕ ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಪಂಚಾಯತಿ ಚಿತ್ತಾಪೂರ, ಮಾನ್ಯ ಶ್ರೀ ಮಲ್ಲಿಕಾರ್ಜುನ್ ಸೇಡಂ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳು ಚಿತ್ತಾಪೂರ, ಸಿಸ್ಟರ್ ಕವಿತಾ ಮುಖ್ಯೋಪಾಧ್ಯಾಯನಿ ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ, ಸಿಸ್ಟರ್ ಅವೆಲಿನ ಮುಖ್ಯೋಪಾಧ್ಯಾಯಿನಿ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ, ಚಿತ್ತಾಪೂರ ಇವರ ನೇತೃತ್ವದಲ್ಲಿ ಹಾಗೂ ತಾಲ್ಲೂಕಿನ ಇತರೆ ಸರ್ಕಾರಿ ಇಲಾಖೆಗಳ ಪ್ರಮುಖ ಅಧಿಕಾರಿಗಳ ಉಪಸ್ಥಿತಿಯಲ್ಲಿ “ಸಾಮೂಹಿಕ ಗೀತಗಾಯನ” ಕಾರ್ಯಕ್ರಮವನ್ನು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಥನಿ ಪ್ರೌಢ ಶಾಲೆ ಚಿತ್ತಾಪೂರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.
ಈ ಸಮಾರಂಭವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಮಹನೀಯರನ್ನು ಶ್ರೀಯುತ ದೇವಪ್ಪ ಸಹಶಿಕ್ಷಕರು ತಮ್ಮ ಸವಿನುಡಿಗಳಿಂದ, ಹೂಗುಚ್ಛ ನೀಡುವುದರೊಂದಿಗೆ ಸ್ವಾಗತಿಸಿದರು, ಹಾಗೂ ಮಹನೀಯ ಅತಿಥಿಗಳಿಂದ ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಎಲ್ಲಾ ಮಹನೀಯ ಅತಿಥಿಗಳು, ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಒಟ್ಟಿಗೆ ಸರಕಾರದ ಆದೇಶಾನುಸಾರ ಸೂಚಿಸಿದ “ಬಾರಿಸು ಕನ್ನಡ ಡಿಂಡಿಂಮವ”, “ಜೋಗದ ಸಿರಿ ಬೆಳಗಿನಲ್ಲಿ” ಹಾಗೂ “ಹುಟ್ಟಿದರೇ ಕನ್ನಡ ನಾಡಲೇ ಹುಟ್ಟಬೇಕು” ಎಂಬ ಮೂರು ಗೀತೆಗಳನ್ನು ಅದ್ಭುತವಾಗಿ ಹಾಡಲಾಯಿತು. ನಂತರ ಮಾನ್ಯ ತಹಸಿಲ್ದಾರರವರು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇನ್ನುಳಿದ ಎಲ್ಲಾ ಕ್ಷೇತ್ರದ ಅಧಿಕಾರಿಗಳ ಸಮ್ಮುಖದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೂಚಿಸಿದ “ಕನ್ನಡ ಸಂಕಲ್ಪವನ್ನು” ನೆರವೇರಿಸಲಾಯಿತು. ಮಾನ್ಯ ತಹಸಿಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳು, ಕನ್ನಡ ಭಾಷೆಯ ಮಹತ್ವ, ಕನ್ನಡ ಭಾಷೆಯ ಕಡ್ಡಾಯ ಬಳಕೆ, ಕನ್ನಡ ಭಾಷೆ ಮತ್ತು ಸಂಸ್ಕøತಿಯ ಇತಿಹಾಸ, ಕನ್ನಡ ಭಾಷೆಯ ಪ್ರಾಮುಖ್ಯತೆ, ಕನ್ನಡಕ್ಕಾಗಿ ಶ್ರಮಿಸಿದ ಹಲವಾರು ಮಹಾನ್ ಸಾಹಿತಿಗಳು, ಕವಿಗಳು, ಕೃತಿ ಕಾದಂಬರಿಕಾರರ ಬಗ್ಗೆ ಸಮಗ್ರ ಮಾಹಿತಿಯನ್ನು, ಮಹತ್ವವನ್ನು ತಮ್ಮ ತಮ್ಮ ಹಿತ ನುಡಿಗಳಿಂದ ಸಭೆಯನ್ನುದ್ಧೇಶಿಸಿ ಮಾತನಾಡಿ, ಮಾರ್ಗದರ್ಶನ ನೀಡಿದರು.
ಕೊನೆಗೆ ಶ್ರೀ ಸಂತೋಷಕುಮಾರ, ಶಿಕ್ಷಣ ಸಂಯೋಜಕರು ಚಿತ್ತಾಪೂರರವರು ಎಲ್ಲರನ್ನು ವಂದಿಸುವದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಶ್ರೀಯುತ ದೇವಪ್ಪ ,ಸಹಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ