ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿಯ ಸ್ಕೌಟ್ಸ್, ಗೈಡ್, ಬುಲ್ ಬುಲ್ ವಾರ್ಷಿಕ ಮೇಳವು ತಾಲೂಕು ಮಟ್ಟದ ರ್ಯಾಲಿಯ ನೀಲ ನಕಾಶೆಯಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಫೆಬ್ರವರಿ 25 ಮತ್ತು 26 ರಂದು ನೆರವೇರಿತು.
ಬೆಳಿಗ್ಗೆ ಧ್ವಜಾರೋಹಣ ಬಳಿಕ ಉದ್ಘಾಟನಾ ಸಮಾರಂಭ ಶಾಲಾ ಮ್ಯಾನೇಜರ್ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ, ಪುತ್ತೂರು ಸ್ಥಳೀಯ ಸಂಸ್ಥೆಯ ಲೀಡರ್ ಆಫ್ ಟ್ರೈನರ್ ಶ್ರೀಮತಿ ಸುನಿತಾ ಉದ್ಘಾಟಿಸಿದರು. ಬಳಿಕ ಪುನಶ್ಚೇತನಾ ಶಿಬಿರ, ಬೆಂಕಿಯಿಲ್ಲದ ಅಡುಗೆ, ಚಟುವಟಿಕೆ, ಪಥಸಂಚಲನ, ವಿವಿಧ ಆಟಗಳು, ಸಂಜೆ ಭವ್ಯ ಶಿಬಿರಾಗ್ನಿ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಿತು. ಇದರ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿಯಾದ ಭಗಿನಿ ಜೆಸಿಂತಾ ಬಿ ಎಸ್ ವಹಿಸಿದ್ದರು. ನಿವೃತ್ತ ಶಿಕ್ಷಕಿ ಶ್ರೀಮತಿ ಡೋರತಿ ಮೇರಿ ಡಿ’ಸೋಜ ಉದ್ಘಾಟಿಸಿದರು. ಮರುದಿನ ಬೆಳಿಗ್ಗೆ ಬಿ ಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ, ಸ್ವಚ್ಛತಾ ಕಾರ್ಯಗಾರ, ಸಂಪನ್ಮೂಲ ವ್ಯಕ್ತಿಗಳ ಸಂವಾದ, ಬಳಿಕ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ನೇತೃತ್ವದಲ್ಲಿ ಸಮಾರೋಪ ಕಾರ್ಯ ನಡೆದು ಧ್ವಜಾಅವರೋಹಣಗೊಳಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಶಾಲಾ ವಾರ್ಷಿಕ ಮೇಳದ ನಾಯಕಿ, ವಿಲ್ಮಾ ಫೆನಾರ್ಂಡಿಸ್ ಹಾಗೂ ಸ್ಕೌಟ್ಸ್, ಗೈಡ್, ಕಬ್ ಬುಲ್ ಬುಲ್ ಶಿಕ್ಷಕರು ಸಹಕರಿಸಿದರು.
ಲಿಟ್ಲ್ ಫ್ಲವರ್ ಶಾಲೆ, ದರ್ಬೆ ಪುತ್ತೂರು
ಭಗಿನಿ ವೆನಿಶಾ ಬಿ ಎಸ್, ಶಾಲಾ ಮುಖ್ಯ ಶಿಕ್ಷಕಿ