Jan 02: ವರ್ಷದ ಕೊನೆಯ ದಿನಗಳು ಯೇಸುವಿನ ಜನನದ ಸಂಭ್ರಮವು ಮುಂದಿನ ವರ್ಷದ ಆರಂಭವು. ಈ ಆರಂಭವು ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ ದಿನಾಂಕ 24.12.2024ರ ಮಂಗಳವಾರದಂದು ಬಹಳ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವು ಪ್ರಾರ್ಥನಾ ಕೂಟದಿಂದ ಪ್ರಾರಂಭವಾಯಿತು. ನಂತರ ಮಕ್ಕಳು ಸೊಗಸಾದ ಸ್ವಾಗತ ನೃತ್ಯದ ಮೂಲಕ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕೆಕ್ ಕತ್ತರಿಸುತ್ತ ಶುಭಾಶಯ ಗೀತೆ ಹಾಡುತ್ತ ಮಕ್ಕಳು ನಲಿದಾಡಿದರು. ಜೊತೆಗೆ ಯೇಸುವಿನ ಜನನದ ಅದ್ಭುತ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು. ಅಲ್ಲದೆ ಹಲವಾರು ಕ್ರಿಸ್‍ಮಸ್ ಹಬ್ಬದ ಸಂದೇಶಗಳನ್ನು ಸಾರುವ ನೃತ್ಯಗಳನ್ನು ಮಕ್ಕಳು ಅತಿ ಉತ್ಸಾಹಭರಿತವಾಗಿ ಮಾಡುತ್ತ ಕಾರ್ಯಕ್ರಮವು ಮುಂದುವರೆಯಿತು. ಕೊನೆಗೆ ಅಧ್ಯಕ್ಷೀಯ ಸ್ಥಾನ ಅಲಂಕರಿಸಿರುವ ಸಿ.ನೀನಾ ಅವರು ತಮ್ಮ ನುಡಿಗಳಲ್ಲಿ ಒಂದು ಮನೆಯಲ್ಲಿ ಇರುವ ಹಲವಾರು ವಾದವಿವಾದಗಳಿಗೆ ಆ ಮನೆಯಲ್ಲಿ ಜನಿಸಿದ ಮಗುವಿನ ಮುಖಾಂತರ ಮುಕ್ತಾಯ ಸಿಗುತ್ತದೆ ಹಾಗೆಯೇ ಯೇಸುವಿನ ಜನನದ ಮೂಲಕ ಜಗತ್ತಿನ ದುಃಖ ದುಮ್ಮಾನಗಳು ಕೊನೆಗೊಂಡವು ಎಂಬ ಹಲವಾರು ವಿಷಯಗಳನ್ನು ತಿಳಿಸುತ್ತ ತಮ್ಮ ಶಿಕ್ಷಕಿ ವೃತ್ತಿಯ ಸಮಯದ ಸವಿನೆನಪುಗಳನ್ನು ಸ್ಮರಿಸುತ್ತ ನೆರೆದವರಿಗೆಲ್ಲರಿಗೂ ಕ್ರಿಸ್‍ಮಸ್ ಹಾಗೂ ಹೊಸವರ್ಷದ ಶುಭಾಶಯಗಳನ್ನು ಕೋರಿದರು. ನಂತರ ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಶ್ರೀಮತಿ ಅರ್ಚನಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ