ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶುಚಿತ್ವ ಆಹಾರ ಪೋಷಣೆ ಮತ್ತು ಆರೋಗ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಿದರು. ಈ ಪ್ರಕಾರ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿದ್ದ ವಿವಿಧ ತರಕಾರಿ ದವಸಧಾನ್ಯ ಮತ್ತು ಪೋಷಣೆಗೆ ಅವಶ್ಯಕವಾದ ಆಹಾರ ಪದಾರ್ಥಗಳನ್ನು ತಂದು ಶಿಕ್ಷಕರ ಮಾರ್ಗದರ್ಶನದಂತೆ ವಿವಿಧ ವಿನ್ಯಾಸಗಳಲ್ಲಿ ಜೋಡಿಸಿ ಪ್ರದರ್ಶನ ಮಾಡಿ ಪೋಷಣೆಗೆ ಅವಶ್ಯಕವಾದ ವಸ್ತುಗಳನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿದರು. ಇದರಿಂದ ಈವರೆಗೆ ಕಂಡು ಕೇಳರಿಯದ ಪೋಷಣಾ ವಸ್ತುಗಳನ್ನು ನೋಡುವ ಭಾಗ್ಯ ವಿದ್ಯಾರ್ಥಿಗಳಿಗೆ ಲಭಿಸುವಂತಾಯಿತು. ಇದೊಂದು ಉತ್ತಮ ಆಭಿಯಾನ ಎಂಬುದು ಮನವರಿಕೆಯಾಯಿತು.

 

 

 

 

 

 

 

 

 

 

 

 

 

 

ಶ್ರೀಮತಿ ಗ್ರೇಸಿ ಪಿಂಟೊ, ಪ್ರಭಾರ ಶಿಕ್ಷಕಿ
ಸೇಕ್ರೇರ್ಟ್ ಹಾರ್ಟ್ ಪ್ರೌಢ ಶಾಲೆ, ಕುಲಶೇಕರ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]