Nov 03: 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇಡೀ ರಾಜ್ಯಾದ್ಯಂತ “ಕೋಟಿ ಕಂಠ ಗಾಯನ” ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಒಂದು ಭಾಗವಾಗಿ ನಮ್ಮ ಶಾಲೆಯಲ್ಲೂ ಕೂಡ 28.10.22ರಂದು “ಕೋಟಿ ಕಂಠ ಗಾಯನ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಕವಿತಾ, ಮುಖ್ಯ ಅತಿಥಿಗಳಾಗಿ ಪಾಲಕ-ಪೋಷಕ ಸಂಘದ ಅಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲ, ಹಾಗೂ ಪಾಲಕ-ಪೋಷಕ ಸಂಘದ ಸದಸ್ಯರು ಆಗಮಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಮ್ಮ ಕಾರ್ಯಕ್ರಮವನ್ನು ಸಂದರ್ಶಿಸಲು ಶ್ರೀ ಶಿವಕುಮಾರರವರು ಬಂದಿದ್ದರು.
ಕಾರ್ಯಕ್ರಮವನ್ನು ಪ್ರಸ್ತಾವನೆ ನುಡಿಗಳಿಂದ ಆರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಹಿರಿಮೆ, ಘನತೆ ಮತ್ತು ಐಸಿರಿಯನ್ನು ಸಾರುವಂತಹ 6 ಹಾಡುಗಳನ್ನು ಹಾಡಿದರು. ಕನ್ನಡದ ಬಗೆಗಿನ ಪ್ರತಿಜ್ಞಾ ವಿಧಿಯನ್ನು ಭಗಿನಿ ಮ್ಯಾಗ್ದಲಿನ್‍ರವರು ನೆರವೇರಿಸಿದರು. ಶ್ರೀ ಶರಣಗೌಡ ಪಾಟೀಲರವರು ವೇದಿಕೆಯನ್ನುದ್ಧೇಶಿಸಿ ನಮ್ಮ ಮಕ್ಕಳ ಗಾಯನವನ್ನು ಮೆಚ್ಚಿ ಹೊಗಳಿದರು. ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದ ಉನ್ನತಿ, ಪ್ರಾಮುಖ್ಯತೆಯನ್ನು ತಿಳಿಸಿದರು. ಶ್ರೀ ಶಿವಕುಮಾರರವರು ಕನ್ನಡ ನಾಡು, ನುಡಿಯ ಹಿರಿಮೆ, ಘನತೆ ಐಸಿರಿಯ ಬಗ್ಗೆ ಮಾತನಾಡಿದರು.
ಶ್ರೀಮತಿ ಸುಷ್ಮಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ