Nov 05: ದಿನಾಂಕ 02.11.22 ರಂದು ಬೆಥನಿ ಪ್ರೌಢ ಶಾಲೆಯಲ್ಲಿ ಪುರಸಭೆ ಕಾರ್ಯಾಲಯ ಚಿತ್ತಾಪೂರ ವತಿಯಿಂದ ನೈರ್ಮಲ್ಯದ ಬಗ್ಗೆ ಅರಿವು, ಜಾಗೃತಿ ಮೂಡಿಸುವುದಕ್ಕೊಸ್ಕರ “ಹರಗೀಲಾ, ಸುಖಾನೀಲ” ಎನ್ನುವ ಘೋಷಣೆಯಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪುರಸಭೆಯ ಎಸ್‍ಪಿಯವರಾದ ಸುನೀಲ ಸರ್‍ರವರು ಹಸಿಕಸ ಮತ್ತು ಒಣ ಕಸದ ಬಗ್ಗೆ ಮಾಹಿತಿಯನ್ನು ನೀಡಿದರು. ಒಣ ಕಸವನ್ನು ಮರುಬಳಕೆ ಮಾಡಿದರೆ, ಹಸಿ ಕಸದಿಂದ ಗೊಬ್ಬರ ಉತ್ಪಾದನೆ ಮಾಡುತ್ತಿದ್ದೇವೆಂದು ಹೇಳಿದರು. ಕಸದಿಂದ ರಸ ಕಾರ್ಯಕ್ರಮದಲ್ಲಿ ಮಕ್ಕಳು ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಿದರೆ, ಅಂತಹ ಮಕ್ಕಳಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವಿರುತ್ತದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ನೀಡಿ. ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣವಾಗಿ ನಿಲ್ಲಿಸಬೇಕು. ಇರುವ ಪ್ಲಾಸ್ಟಿಕ್‍ನ್ನು ಅನ್ನು ಮರುತಯಾರಿಕೆ (ರಿಸೈಕಲ್) ಮಾಡಿ, ಮರುಬಳಕೆ (ರಿಯುಸ್) ಮಾಡಬಹುದಾಗಿ ಹೇಳಿದರು. ಕ್ಲೀನ್ ಸಿಟಿಗೋಸ್ಕರ ಭಾರತ ಸರ್ಕಾರ ನಗರಗಳಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ.

ಕಸ ವಿಲೇವಾರಿಯ ಬಗ್ಗೆ ಮಕ್ಕಳು ಮಾಡಿದ ಭಾಷಣವನ್ನು ಪುರಸಭೆ ಕಾರ್ಯಾಲಯದ ಎಸ್‍ಐರವರಾದ ಆದ ಶ್ರೀ ವೆಂಕಟೇಶರವರು ವಿಡಿಯೋ ಚಿತ್ರೀಕರಿಸಿಕೊಂಡರು. ಕಸ ವಿಲೇವಾರಿಯ ಬಗ್ಗೆ ಮಕ್ಕಳು ತಮ್ಮ ಕುಟುಂಬದವರಿಗೆ ಮತ್ತು ನೆರೆಹೊರೆಯವರಿಗೆ ಕೂಡ ಮಾಹಿತಿ ನೀಡಬೇಕೆಂದು ಹೇಳಿದರು. ಕಾರ್ಯಕ್ರವನ್ನು ಶ್ರೀ ದೇವಪರವರ ವಂದನಾರ್ಪಣೆಗಳೊಂದಿಗೆ ಮುಕ್ತಾಯಗೊಳಿಸಲಾಯಿತು.

 

 

 

 

 

 

ಶ್ರೀಯುತ ಶೇಷಪ್ಪ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]