June 12: ದಿನಾಂಕ 31.05.2023ರಂದು ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಪ್ರಾಥಮಿಕ ಶಾಲೆಗಳು ಜಂಟಿಯಾಗಿ ವಿಕಲಚೇತನರ ಕುರಿತು ಶಿಕ್ಷಕರಿಗೆ ಪೂರ್ವಭಾವಿ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ರಂಗನಾಥ, ಅತಿಥಿಗಳಾಗಿ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಪ್ರಾಥಮಿಕ ಶಾಲೆಯ ಸಂಚಾಲಕರು, ಭಗಿನಿ ಸಿಂಥಿಯಾ, ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಭಗಿನಿ ಕವಿತಾ, ಶಿಶುವಿಹಾರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಭಗಿನಿ ಸಿಂಪ್ರೋಜ್ ಜ್ಯೋತಿ ಸೇವಾ ಕೇಂದ್ರದ ಸಮಾಜ ಸೇವಕರಾದ ಶ್ರೀ ಮಹಾದೇವ ಮತ್ತು ಶಿಶುವಿಹಾರ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಶಿವಕಾಂತ ಸರ್‍ರವರು ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಶ್ರೀ ದೇವಪ್ಪ ಸರ್‍ರವರ ಸ್ವಾಗತ ಭಾಷಣದೊಂದಿಗೆ ಮಾಲಾರ್ಪಣೆ ಮಾಡಿ ಕಿರುಕಾಣಿಕೆ ನೀಡಿ ಸ್ವಾಗತ ಕೋರಲಾಯಿತು.
ಡಾ. ರಂಗನಾಥರವರು ವಿಕಲಚೇತನರ ಕುರಿತು ಸವಿಸ್ತಾರ ವಿವರಣೆಯನ್ನು ನೀಡಿದರು. ಪ್ರತಿ ಕಾಲಘಟದಲ್ಲಿ ವಿಕಲಚೇತನರನ್ನು ಸಮಾಜ ನೋಡುತ್ತಿದ್ದ ದೃಷ್ಟಿಯ ಬಗ್ಗೆ ಹೇಳಿದರು. ವಿಕಲಚೇತನರು ಸಾಮಾಜಿಕವಾಗಿ, ಆರ್ಥಿಕವಾಗಿ, ಸಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಜಾರಿಗೆ ತಂದ ಅಂಗವಿಕಲ ಹಕ್ಕುಗಳ ಕಾನೂನು ಬಗ್ಗೆ ಮತ್ತು 21ಬಗೆಯ ಅಂಗವಿಕಲರ ವಿಧಗಳನ್ನು ತಿಳಿಸಿದರು. ಸಾಮಾನ್ಯ ಶಿಕ್ಷಣದಲ್ಲಿ ಅಂಗವಿಕಲರನ್ನು ತೆಗೆದುಕೊಂಡು ಅಂತರ್ಗತ ಶಿಕ್ಷಣ ಜಾರಿಗೆ ಬಂದಿರುವ ವಿಷಯವನ್ನು ಹೇಳುತ್ತಾ ಶಿಕ್ಷಕರು ಆ ಮಕ್ಕಳಿಗೆ ಅನುಗುಣವಾಗಿ, ಅವರಿಗೆ ಮನವರಿಕೆಯಾಗುವಂತೆ ವಿವಿಧ ಕಲಿಕಾ ಸಾಮಾಗ್ರಿಗಳನ್ನು ಬಳಸುವುದರ ಮುಖಾಂತರ ಅತ್ಯಂತ ಉಪಯುಕ್ತ ಜ್ಞಾನವನ್ನು ನೀಡಬೇಕೆಂದು ಹೇಳಿದರು.
ಈ ಕಾರ್ಯಕ್ರಮವು ಶ್ರೀಮತಿ ರಾಜೇಶ್ವರಿಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.