July 04: ಪ್ರತಿ ವರ್ಷ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಸಾಗಾಣಿಕೆಯ ವಿರುದ್ದದ ದಿನವನ್ನಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಜ್ಯೋತಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 26.06.2023 ರಂದು ಜ್ಯೋತಿ ಪ್ರೌಢ ಶಾಲೆಯ ಮತ್ತು ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಮಾದಕ ವಸ್ತುಗಳ ವ್ಯಸವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಬೆಂಗಳೂರು ಬಾಣಸವಾಡಿ ಆರಕ್ಷಕ ಠಾಣೆಯ ಸಂಚಾರಿ ಪೆÇೀಲೀಸ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಮತ್ತು ಜ್ಯೋತಿ ಪ್ರೌಢ ಶಾಲೆಯಲ್ಲೇ ವ್ಯಾಸಂಗ ಮಾಡಿ ಪೆÇೀಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವ್ರತವಾಗಿರುವ ಹನುಮಂತಪ್ಪ ಇವರುಗಳು ನಡೆಸಿಕೊಟ್ಟರು.
ಹನುಮಂತಪ್ಪರವರು ಮಕ್ಕಳನ್ನು ಉದ್ದೇಶಿಸಿ ಮಾದಕ ವ್ಯಸನಕ್ಕೆ ಸಂಬಂಧಿಸಿದಂತೆ ಮತ್ತು ಮಾದಕ ವಸ್ತುಗಳನ್ನು ಪರಿಚಯಿಸಿದವರ ಉದಾಹರಣೆ, ನಿದರ್ಶನಾತ್ಮಕ ಸನ್ನಿವೇಶಗಳು ಮತ್ತು ಸಣ್ಣ ಕಥೆಗಳ ನಿರೂಪಣೆಗಳು ಇದರ ಮೂಲಕ ಪರಿಣಾಮಕಾರಿಯಾಗಿ ಮಕ್ಕಳ ಮನಮುಟ್ಟುವಂತೆ ಮಾದಕ ವಸ್ತುಗಳ ಸೇವನೆಗೆ ಕಾರಣ ಅವುಗಳ ವಿರುದ್ದ ಇರುವ ಕಾನೂನು ಮತ್ತು ಶಿಕ್ಷೆ ಹಾಗೂ ವ್ಯಸನದಿಂದ ಉಂಟಾಗುವ ಯುವಕರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಹೆಚ್. ಎಸ್. ಬಸವರಾಜು, ಕನ್ನಡ ಉಪನ್ಯಾಸಕ
ಜ್ಯೋತಿಪದವಿ ಪೂರ್ವ ಕಾಲೇಜು, ಕಾಚರಕನಳ್ಳಿ