July 25: ದಿನಾಂಕ 19.07.2023 ರಂದು ಪೋಲಿಸ್ ಇಲಾಖೆವತಿಯಿಂದ ಆತ್ಮ ರಕ್ಷಣೆ ಕುರಿತು ಮಾಹಿತಿ ಕೊಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಹೊರಗಡೆ ಹೋದಾಗ, ಆಗುವ ತೊಂದರೆಗಳನ್ನು ಎದುರಿಸಲು ಹುಡುಗಿಯರು ಆತ್ಮರಕ್ಷಣೆಯ ಕಲೆಯನ್ನು ಕಲಿತಿರಬೇಕು. ತಮ್ಮ ಕೈ ಕಾಲುಗಳನ್ನೇ ಬಳಸಿಕೊಂಡು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಮುಷ್ಠಿ ಕಟ್ಟುವುದು, ಕೈ, ಕಾಲು, ಬೆರಳುಗಳನ್ನು ತಿರುಚುವುದು, ಮುರಿಯುವುದು, ಒದೆಯುವುದರ ಮೂಲಕ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಯಾವುದೇ ವ್ಯಕ್ತಿ ತಮ್ಮ ಮೇಲೆ ಆಕ್ರಮಣ ಮಾಡಿದಾಗ ಅವರ ಕೈ ತಿರುಚಿ, ಸೂಕ್ಷ್ಮ ಅಂಗಾಂಗಕ್ಕೆ ಪೆಟ್ಟು ಮಾಡಬೇಕು. ಕತ್ತಿನ ಮೇಲ್ಭಾಗದಲ್ಲಿ ಅಂಗೈ ಅಡಲಾಗಿ ಹಿಡಿದು ದಾಳಿ ಮಾಡಿ ಅವರಿಂದ ತಪ್ಪಿಸಿಕೊಳ್ಳಬೇಕು. ಕಿವಿಗೆ ಜೋರಾಗಿ ಹೊಡೆಯುವುದು, ಕಣ್ಣುಗಳನ್ನು ಬಿಗಿಯಾಗಿ ಒತ್ತಿ ಅವರ ದಾಳಿಯಿಂದ ಬಿಡಿಸಿಕೊಂಡು ಜನನಿಬಿಡ ಪ್ರದೇಶಗಳ ಕಡೆಗೆ ಓಡಿ ಹೋಗಬೇಕು. ಈ ರೀತಿ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡು ಬಲಿಷ್ಠರಾಗಬೇಕೆಂದು ಮಕ್ಕಳಿಗೆ ಮಾಹಿತಿ ನೀಡಿದರು. ಶ್ರೀಮತಿ ಸುಷ್ಮಾ, ಸಹಶಿಕ್ಷಕಿ ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ