August 02: ದಿನಾಂಕ 31.07.2023 ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಫಾದರ್ ಅಶ್ವಿಲ್ ಡೈಯಾಸ್ ಸಿಎಸ್‍ಎಸ್‍ಆರ್ ರವರಿಂದ ಹತ್ತನೇ ತರಗತಿಯ ಮಕ್ಕಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಅದರಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಹಲವು ಚಟುವಟಿಕೆಗಳ ಮೂಲಕ ಅವರಿಗೆ ಮನದಟ್ಟು ಮಾಡಿದರು. ಅಲ್ಲದೆ ಅಬ್ದುಲ ಕಲಾಮ, ನ್ಯೂಟನ ಮತ್ತು ಮೀರಾಬಾಯಿ ಇಂತಹ ಹಲವಾರು ಸಾಧಕರ ಪ್ರೇರಣಾದಾಯಕ ಕಥೆಗಳನ್ನು ಹೇಳಿ ಮಕ್ಕಳ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಯಾವಾಗಲೂ ಅತ್ಯುನ್ನತ ಗುರಿ ಹೊಂದಿರಬೇಕೆಂದು ಮನೋಜ್ಞವಾಗಿ ವಿವರಿಸಿದರು. ಕೇವಲ ಪಾಠಗಳೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಯಶಸ್ಸನ್ನು ಕಾಣುವ ಪ್ರಮುಖ ಅಂಶಗಳನ್ನು ಉದಾಹರಣೆಗಳ ಮೂಲಕ ವಿವರಿಸಿದರು. ಅಲ್ಲದೆ ಮಕ್ಕಳ ಸಾಧನೆಗೆ ಕುಟುಂಬ ಮತ್ತು ಪಾಲಕರಿಂದಾಗುವ ಕೆಲವು ಸಮಸ್ಯೆಗಳನ್ನು ಸಹ ವಿವರಿಸಿ ಮಕ್ಕಳಲ್ಲಿ ಧೈರ್ಯ ತುಂಬುವಂತಹ ಮಾತುಗಳನ್ನು ಹೇಳಿದರು. ಅವಮಾನಗಳನ್ನು ಲಕ್ಷಿಸದೆ ಸನ್ಮಾನವನ್ನು ಪಡೆಯಲಿಕ್ಕೆ ಮಕ್ಕಳಲ್ಲಿ ಆಸೆ, ಆಸಕ್ತಿ, ಒಳ್ಳೆಯ ಗೆಳೆತನ, ವಿದ್ಯೆಯೆಂಬ ಬಂಡವಾಳ ಇತ್ಯಾದಿಗಳು ಇರಬೇಕೆಂದು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.
ಶ್ರೀಯುತ ದೇವಪ್ಪ ತಳವಾರ, ಸಹಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ