Sep 22: 2023-24ನೇ ಸಾಲಿನ ಪಾಲಕ-ಶಿಕ್ಷಕ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆಯನ್ನು ದಿನಾಂಕ 19.08.23 ಶನಿವಾರದಂದು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಿಸ್ಟರ್ ಕವಿತಾ ಬಿ ಎಸ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಮಕ್ಕಳ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮೊದಲನೆಯದಾಗಿ ಎರಡು ವರ್ಷಗಳಿಂದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದಂತಹ ಶ್ರೀಯುತ ಶರಣಗೌಡ ಪಾಟೀಲರವರನ್ನು ನಿಯಮದಂತೆ ಬಿಳ್ಕೋಟ್ಟು ಅವರ ಸ್ಥಾನಕ್ಕೆ ನೂತನವಾಗಿ ಶ್ರೀಯುತ ಸೂರ್ಯಕಾಂತರವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲರ ಒಪ್ಪಿಗೆಯಂತೆ ಆಯ್ಕೆ ಮಾಡಲಾಯಿತು. ಈ ನೂತನ ಸಭೆಗೆ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ಪಾಲಕರು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀಯುತ ವಿಶ್ವನಾಥ ಸರ್ ರವರು ನಿರೂಪಿಸಿದರು. ಶ್ರೀಯುತ ದೇವಪ್ಪ ಸರ್‍ರವರು ಶಾಲಾ ಸೌಲಭ್ಯಗಳನ್ನು ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕವಿತಾರವರು ಸಭೆಯ ಉಪಾಧ್ಯಕ್ಷರು, ಸದಸ್ಯರು ಮತ್ತು ಶಿಕ್ಷಕರ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಈ ಹಿಂದೆ ಕಾರ್ಯ ನಿರ್ವಹಿಸಿದ ಶ್ರೀಯುತ ಶರಣಗೌಡ ಪಾಟೀಲ ಸರ್‍ರವರು ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ನಮ್ಮ ಶಾಲೆಯ ಪರಿಸರ, ಶಿಸ್ತು, ಶಿಕ್ಷಕ-ಶಿಕ್ಷಕಿಯರ ಪಾಠಗಳನ್ನು ಶಾಲಾ ಮೈದಾನ, ಮಕ್ಕಳಿಗೆ ನೀಡಲಾಗವ ಮೌಲ್ಯಗಳನ್ನು ತಿಳಿಸುತ್ತಾ ನೂತನ ಸದಸ್ಯರು ಹಾಗೂ ಉಪಾಧ್ಯಕ್ಷರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದರು. ನಂತರ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬೆಥನಿ ಪ್ರೌಢ ಶಾಲಾ ಸಂಚಾಲಕರು ಹಾಗೂ ಶಿಶುವಿಹಾರ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸಿಸ್ಟರ್ ಸಿಂಪ್ರೋಜ್‍ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಯುತ ವಿಶ್ವನಾಥ ಸರ್‍ರವರು ಎಲ್ಲರನ್ನು ವಂದಿಸುವುದರೊಂದಿಗೆ ನೂತನ ರಚನಾ ಸಭೆಯ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.
ಶ್ರೀಯುತ ದೇವಪ್ಪ ತಳವಾರ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ