Oct 02: ಮಕ್ಕಳಲ್ಲಿ ಸೂಪ್ತವಾಗಿರುವ ಪ್ರತಿಭೆಗಳನ್ನು ಹೊರತರುವ ವೇದಿಕೆಯೇ ಪ್ರತಿಭಾ ಕಾರಂಜಿ. ಸೆಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ ಬಸರಿಕಟ್ಟೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಚರಿಸಲಾಯಿತು. ಕ್ಲಸ್ಟರ್‍ನ ಸಿ ಆರ್ ಪಿ ಯವರಾದ ಶ್ರೀಮಾನ್ ರಾಮಚಂದ್ರರವರು ತಮ್ಮ ಪ್ರಾಸ್ಥವಿಕ ನುಡಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ ಇದನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡಿದ್ದಾರೆ. ಇಲಾಖೆಯ ಸಹಕಾರದಿಂದ ಈ ಪ್ರತಿಭಾ ಕಾರಂಜಿ ನಡೆಯುತ್ತಿದೆ, ಪ್ರತಿಯೊಂದು ಮಗು ತಮ್ಮಲ್ಲಿರುವ ಪ್ರತಿಭೆಗಳನ್ನು ಉತ್ತಮ ರೀತಿಯಲ್ಲಿ ಯಾವುದೇ ಅಂಜಿಕೆ ಇಲ್ಲದೆ ಪ್ರದರ್ಶಿಸಬೇಕು ಎಂದರು ಇದಕ್ಕೆ ಅಧ್ಯಕ್ಷರಾಗಿ ಸ್ಥಳೀಯ ಧರ್ಮಕೇಂದ್ರದ ಗುರುಗಳಾದ ವಂದನೀಯ ಗುರು ಸಂತೋಷ ಕುಮಾರ್‍ರವರು ಅಲಂಕರಿಸಿ, ಪ್ರತಿಭಾ ಕಾರಂಜಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಹೊರತರುವ ಉತ್ತಮ ವೇದಿಕೆಯಾಗಿದೆ. ಇಂತಹ ಅವಕಾಶವನ್ನು ಸೆಕ್ರೆಡ್ ಹಾರ್ಟ್ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಕೊಡುತ್ತಲೇ ಬಂದಿದೆ ಎಂದು ಪ್ರಶಂಸಿಸಿದರು. ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜ್ಯೋತಿಯವರು ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಸೂಕ್ತ ವೇದಿಕೆ, ನಿರ್ಣಾಯಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬೇಧ ಭಾವ ಇಲ್ಲದೇ ನಿರ್ಣಯ ನೀಡಬೇಕೆಂದು ತಿಳಿಸಿದರು. ಗ್ರಾಮ ಪಂಚಾಯತ್ ಆಧ್ಯಕ್ಷರಾದ ಶ್ರೀ ಗೋಪಾಲಕೃಷ್ಣರವರು ತಮ್ಮ ಹಿತನುಡಿಗಳಿಂದ ವಿದ್ಯಾರ್ಥಿಗಳಿಗೆ ಹುರುದುಂಬಿಸಿದರಲ್ಲದೇ, ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಸತೀಶ್ ಡಿಸ್.ರವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಶಾಲೆ ಕಳೆದ 50 ವರ್ಷಗಳಿಂದಲೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರತಂದು ಅವರು ಮೌಲ್ಯಭರಿತ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹೊಗಳಿದರು. ಈ ಕಾರ್ಯಕ್ರಮದಲ್ಲಿ 16 ಶಾಲೆಗಳಿಂದ ವಿಧ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಗಾಮಸ್ಥರು ಸೇರಿ ಸುಮಾರು 700-800 ಮಂದಿ ಭಾಗವಹಿಸಿ ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸ. ಮೇರಿ ಲೋಪಿಸ್‍ರವರು ಎಲ್ಲರನ್ನು ಹೃದಯಂತರಾಳದಿಂದ ವಂದಿಸಿದರು.

 

 

ಸಹೋದರಿ ಮೇರಿ ಲೋಪಿಸ್
ಸೆಕ್ರೆಡ್ ಹಾರ್ಟ್ ಹಿ ಪ್ರಾ. ಶಾಲೆ ಬಸರೀಕಟ್ಟೆ

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]