Jan 25: ಬೆಥನಿ ಸಂಸ್ಥೆಗೆ ಮೂಲ ಬುನಾದಿಯಾಗಿ ಆಧಾರ ಸ್ಥಂಭವಾಗಿ ನಿಂತು, ನೆಟ್ಟ ಸಣ್ಣ ಬೀಜವೊಂದು ಹೆಮ್ಮರವಾದಂತೆ, ಬೆಥನಿ ಸಂಸ್ಥೆಯನ್ನು ಭಾರತದಲ್ಲಿ ಅಷ್ಟೇ ಅಲ್ಲದೆ ದೇಶವಿದೇಶಗಳಲ್ಲೂ ಪಸರಿಸಿರುವಂತಹ, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಯಂತೆ ಬಡ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯವನ್ನೊದಗಿಸಿಕೊಟ್ಟಂತಹ, ಹೀಗೆ ಹತ್ತು ಹಲವು ಸಮಾಜ ಸೇವೆಗಳಲ್ಲಿ ತೊಡಗಿ ತನ್ನ ಇಡೀ ಜೀವನವನ್ನೇ ಬೇರೆಯವರ ಸಹಾಯಕ್ಕಾಗಿ ಮುಡಿಪಾಗಿಟ್ಟಿರುವ ದೇವರ ಸೇವಕ ಆರ್.ಎಫ್.ಸಿ.ಮಸ್ಕರೇನ್ಹಸ್‍ರವರ 150ನೇ ಹುಟ್ಟು ಹಬ್ಬ ಹಾಗೂ ಯಾಜಕ ದೀಕ್ಷೆಯ 125ನೇ ವಾರ್ಷಿಕೋತ್ಸವದ ಪವಿತ್ರ ದಿನ ಇಂದು. ಅಂದರೆ ಜನೆವರಿ 23, 2024. ಈ ಸಂಭ್ರಮಾಚರಣೆಯನ್ನು ನಮ್ಮ ಬೆಥನಿ ಪ್ರೌಢಶಾಲೆಯಲ್ಲಿ ಮೊದಲಿಗೆ ಪ್ರಾರ್ಥನಾ ಕೂಟದೊಂದಿಗೆ, ಆರ್.ಎಆರ್.ಎಫ್.ಸಿ.ಮಸ್ಕರೇನ್ಹಸ್ ರವರ 150ನೇ ಹುಟ್ಟುಹಬ್ಬದ ಆಚರಣೆ.

ಬೆಥನಿ ಸಂಸ್ಥೆಗೆ ಮೂಲ ಬುನಾದಿಯಾಗಿ ಆಧಾರ ಸ್ಥಂಭವಾಗಿ ನಿಂತು, ನೆಟ್ಟ ಸಣ್ಣ ಬೀಜವೊಂದು ಹೆಮ್ಮರವಾದಂತೆ, ಬೆಥನಿ ಸಂಸ್ಥೆಯನ್ನು ಭಾರತದಲ್ಲಿ ಅಷ್ಟೇ ಅಲ್ಲದೆ ದೇಶವಿದೇಶಗಳಲ್ಲೂ ಪಸರಿಸಿರುವಂತಹ, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಯಂತೆ ಬಡ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯವನ್ನೊದಗಿಸಿಕೊಟ್ಟಂತಹ, ಹೀಗೆ ಹತ್ತು ಹಲವು ಸಮಾಜ ಸೇವೆಗಳಲ್ಲಿ ತೊಡಗಿ ತನ್ನ ಇಡೀ ಜೀವನವನ್ನೇ ಬೇರೆಯವರ ಸಹಾಯಕ್ಕಾಗಿ ಮುಡಿಪಾಗಿಟ್ಟಿರುವ ದೇವರ ಸೇವಕ ಆರ್.ಎಫ್.ಸಿ.ಮಸ್ಕರೇನ್ಹಸ್‍ರವರ 150ನೇ ಹುಟ್ಟು ಹಬ್ಬ ಹಾಗೂ ಯಾಜಕ ದೀಕ್ಷೆಯ 125ನೇ ವಾರ್ಷಿಕೋತ್ಸವದ ಪವಿತ್ರ ದಿನ ಇಂದು. ಅಂದರೆ ಜನೆವರಿ 23, 2024. ಈ ಸಂಭ್ರಮಾಚರಣೆಯನ್ನು ನಮ್ಮ ಬೆಥನಿ ಪ್ರೌಢಶಾಲೆಯಲ್ಲಿ ಮೊದಲಿಗೆ ಪ್ರಾರ್ಥನಾ ಕೂಟದೊಂದಿಗೆ, ಆರ್.ಎಫ್.ಸಿ.ಮಸ್ಕರೇನ್ಹಸ್‍ರವರ ಭಾವಚಿತ್ರಕ್ಕೆ ಹಾಗೂ ಭಾವ ಪುತ್ಥಳಿಗೆ ಹೂಮಾಲೆ ಹಾಕುವುದರ ಮೂಲಕ ಕಾರ್ಯಕ್ರಮವು ನೃತ್ಯ, ರೇಮಂಡರ ಸಂಕ್ಷಿಪ್ತ ಜೀವನ ವಿವರಣೆ, ಅಲ್ಲದೆ ಅವರ ವಿಚಾರಧಾರೆಗಳನ್ನು ಕೂಡ ಮಕ್ಕಳು ಅರ್ಥಪೂರ್ಣವಾಗಿ ಪ್ರದರ್ಶಿಸಿದರು. ಇನ್ನೂ ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿ ನಮ್ಮ ಬೆಥನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ.ಕವಿತಾರವರು ಮಸ್ಕರೇನ್ಹಸ್‍ರವರ ಸಾಧನೆಗಳ ವಿವರವನ್ನು ಬಿಚ್ಚಿಟ್ಟರಲ್ಲದೆ, ಮಕ್ಕಳಿಗೆ ಒಳ್ಳೆಯ ಸಂದೇಶವನ್ನು ನೀಡಿದರು.

ಕೊನೆಗೆ ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

 

 

 

 

 

 

ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]