Feb 01: ದಿನಾಂಕ 30.01.2024 ರಂದು ಕುಷ್ಠರೋಗದ ಕುರಿತು ನಮ್ಮ ಶಾಲೆಯ ಮಕ್ಕಳಿಗೆ ಮಾಹಿತಿ ನೀಡಲು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯಾಧಿಕಾರಿಗಳು ಡಾ.ಶಾಂತಯ್ಯ ಮಠಪತಿ, ಹದಿಹರೆಯ ಆರೋಗ್ಯ ಸಮಾಲೋಚಕರಾದ ಶ್ರೀಮತಿ ಕಾಳಮ್ಮ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರೀಮತಿ ಸಂಗೀತಾ ಅವರು ತಮ್ಮ ಸಹಚರರೊಂದಿಗೆ ಶಾಲೆಗೆ ಆಗಮಿಸಿದ್ದರು.
ಶ್ರೀಮತಿ ಕಾಳಮ್ಮರವರು ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿದರು. ಕುಷ್ಠರೋಗ ಇದು ದೇಹದ ಯಾವ ಭಾಗದಲ್ಲಾದರೂ ಬರಬಹುದು. ತಿಳಿ, ಬಿಳಿ, ತಾಮ್ರ ವರ್ಣದ ಮಚ್ಛೆಯಾಗಿದ್ದು, ಈ ತರಹದ ಭಾಗಕ್ಕೆ ರೋಮಗಳು ಇರುವುದಿಲ್ಲ, ಸ್ಪರ್ಷದ ಅನುಭವ ಆಗುವುದಿಲ್ಲ. ಈ ರೋಗ ವಿಪರೀತವಾದಾಗ ಮನುಷ್ಯನ ದೇಹದಲ್ಲಿ ನರದೌರ್ಬಲ್ಯ ಉಂಟಾಗುತ್ತದೆ ಎಂದು ವಿವರಿಸಿದರು.
ಗಾಂಧೀಜಿಯವರು ಹುತಾತ್ಮರಾದ ದಿನವಾದ ಇಂದು ಅವರ ಹೆಸರಿನಲ್ಲಿ ಕುಷ್ಠರೋಗದ ನಿವಾರಣೆಯ ಕುರಿತು ಪ್ರತಿಜ್ಞಾವಿಧಿಯನ್ನು ಮಕ್ಕಳಿಂದ ಘೋಷಣೆ ಮಾಡಲಾಯಿತು.
ಕು.ಅರುಣಕುಮಾರಿ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ