Feb 7: ಮನುಷ್ಯ ನೀರು, ಅಗ್ನಿ ಮತ್ತು ಗಾಳಿಯ ಜೊತೆ ಸೆಣಸಾಟ ಆಡಬಾರದು. ಒಂದು ವೇಳೆ ನಾವು ಅವುಗಳನ್ನು ಕೆಣಕಿದರೆ ಅವು ನಮ್ಮನ್ನು ಆಟವಾಡಿಸುತ್ತವೆ ಎಂಬುದು ಸರ್ವಕಾಲಿಕ ಸತ್ಯವಾದ ಮಾತು.
ಇದನ್ನು ಗಮನದಲ್ಲಿಟ್ಟುಕೊಂಡು ದಿನಾಂಕ 06/02/2024ರ ಮಂಗಳವಾರದಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದವರು ನಮ್ಮ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಅಗ್ನಿ ದುರಂತಗಳ ಬಗ್ಗೆ ಎಚ್ಚರಿಕಾ ಕ್ರಮಗಳನ್ನು ಸವಿವರವಾಗಿ ತಿಳಿಸಿ ಹೇಳಿದರು.
ಶ್ರೀಯುತ ಸತೀಶ ಮಟ್ಟಿ ಅವರು ಅಗ್ನಿಶಾಮಕ ದಳದ ತಂಡದವರಿಗೆ ಸ್ವಾಗತಿಸಿದರು. ಮೊದಲಿಗೆ ಅವರು ಅಗ್ನಿ ವ್ಯಾಖ್ಯಾನವನ್ನು ಒಂದು ತ್ರಿಕೋನದ ಮೂಲಕ ಗಾಳಿ, ಶಾಖ ಮತ್ತು ಒಂದು ಉರಿಯುವ ವಸ್ತು ಈ ಮೂರು ಸೇರಿದರೆ ದಹನ ಕ್ರಿಯೆ ಸಂಭವಿಸುತ್ತದೆ ಎಂದು ಮಾರ್ಮಿಕವಾಗಿ ತಿಳಿ ಹೇಳಿದರು. ಅಲ್ಲದೆ ಅಗ್ನಿ ದುರಂತಗಳಲ್ಲಿ ನಾಲ್ಕು ರೀತಿಯ ದುರಂತಗಳಾಗುತ್ತವೆ. ಅವುಗಳನ್ನು ಹೇಗೆ ಶಮನ ಮಾಡಬೇಕೆಂಬುದರ ವಿಧಾನಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
D.C.P (Dry Chemical Powder) ಇದು “Mother of Fire Extinguisher” ಇದು ಎಂಬುದನ್ನು ಬಹಳ ಒತ್ತುಕೊಟ್ಟು ಹೇಳಿದರು. ಕೊನೆಗೆ ಮನೆಗಳಲ್ಲಿ ಸಿಲೆಂಡರ ಬಳಕೆ ಮಾಡುವಾಗ ತೆಗೆದುಕೊಳ್ಳುವ ಎಚ್ಚರಿಕೆಗಳನ್ನು ಮಕ್ಕಳಿಗೆ ಮನೋಜ್ಞವಾಗಿ ತಿಳಿಸಿಹೇಳಿದರು. ಅಂತ್ಯದಲ್ಲಿ ಶ್ರೀಯುತ ವಿಶ್ವನಾಥ ಕುಂಬಾರ ಸರ್ ಅವರು ಅಗ್ನಿ ಶಾಮಕ ದಳದ ತಂಡದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ