June 13: ಮನುಷ್ಯನ ಜೀವನದಲ್ಲಿ ಪರಿಸರ ಬಹು ಮುಖ್ಯ ಪಾತ್ರ ವಹಿಸುತ್ತದೆ. ಈ ಪರಿಸರವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ತಿಳಿಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ದಿನಾಂಕ 05-06-2024 ರಂದು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ವಿಶ್ವ ಪರಿಸರ ದಿನವನ್ನು ಬಹು ಅರ್ಥಪೂರ್ಣವಾಗಿ ಸಸಿಯನ್ನು ನೆಡುವ ಮೂಲಕ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ನೂತನ ಶಾಲಾ ಸಂಚಾಲಕರಾದ ವಂ ಭಗಿನಿ ಅನಿತಾ ಶಾಂತಿ ರವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು. ಮೊದಲಿಗೆ ಒಂದು ಚಿಕ್ಕ ಸಸಿಯನ್ನು ನೆಡುವ ಮೂಲಕ ಶಾಲಾ ಮುಖೋಪಾಧ್ಯಾಯನಿಯವರು ಪರಿಸರ ದಿನವನ್ನು ಉದ್ಘಾಟಿಸಿದರು. ತದನಂತರ ಉಳಿದ ಶಿಕ್ಷಕರು ಸಸಿಗೆ ನೀರು ಹಾಕುವ ಮೂಲಕ ಪರಿಸರವನ್ನು ಬೆಳೆಸುವ ಸಂದೇಶವನ್ನು ನೀಡಿದರು.
ಶ್ರೀಮತಿ. ನೀಲಂ ಜಾಧವ, ವಿಜ್ಞಾನ ಶಿಕ್ಷಕಿ
ಸಂತ ಜೋಸೆಫರ ಪ್ರೌಢಶಾಲೆ, ಸಂತಿಬಸ್ತವಾಡ