June 15: ಕಲಬುರಗಿ ಡಯಾಸಿಸ್ ಅವರ ವತಿಯಿಂದ ಕಲಬುರಗಿಯ ಬಿಷಪ್ ಹೌಸನಲ್ಲಿ ದಿನಾಂಕ 13.06.2024 ಗುರುವಾರದಂದು ಕರ್ನಾಟಕ ರಿಜನಲ್ ಕಮಿಶನ್ ಫಾರ್ ಎಜುಕೇಶನ್‍ನ ಕಾರ್ಯದರ್ಶಿಗಳಾದ, ಡಾ.ಫ್ರಾನ್ಸಿಸ್ಸ್ ಆಸ್ಸಿಸಿ ಅಲಮಿಡಾ ಫಾದರ ಅವರಿಂದ ಶಿಕ್ಷಕರಿಗೆ ತರಬೇತಿ ಮತ್ತು ಕಾರ್ಯಾಗಾರ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅದರಲ್ಲಿ ನಮ್ಮ ಬೆಥನಿ ಪ್ರೌಢ ಶಾಲೆಯಿಂದ ನಾಲ್ಕು ಜನ ಶಿಕ್ಷಕರು ಭಾಗವಹಿಸಿದ್ದರು.

ಡಾ. ಫ್ರಾನ್ಸಿಸ್ಸ ಆಸ್ಸಿಸಿ ಅಲಮಿಡಾ ಫಾದರ ಅವರು ಶಿಕ್ಷಕರ ನಿಜಜೀವನದ ಸಣ್ಣ ಸಂಗತಿಯೊಂದನ್ನು ಉದಾಹರಣೆಯನ್ನಾಗಿಟ್ಟುಕೊಂಡು ಆ ಸಂಗತಿಯಲ್ಲಿನ ತಪ್ಪನ್ನು ಸರಿಪಡಿಸುವ ವಿಧಾನದೊಂದಿಗೆ ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳುವುದು ಹೇಗೆಂಬುದನ್ನು ಶಿಕ್ಷಕರಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಭಾವನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಅವುಗಳಿಗೆ ತಮ್ಮದೇ ಶೈಲಿಯಲ್ಲಿ ಬಹು ಆತ್ಮೀಯವಾಗಿ ಪರಿಹಾರಗಳನ್ನು ಸೂಚಿಸಿದರು.

ಮುಂದುವರೆದು ವಿದ್ಯಾರ್ಥಿ, ಸಿಬ್ಬಂದಿ ವರ್ಗ, ಮುಖ್ಯೋಪಾಧ್ಯಾಯಿನಿ ಹಾಗೂ ಪಾಲಕರ ಜೊತೆ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಯ ಸಂಬಂಧಗಳು ಹೇಗಿರಬೇಕೆಂಬುದನ್ನು ಹಲವಾರು ಮೌಲ್ಯಾಧಾರಿತ ಅಂಶಗಳೊಂದಿಗೆ ವಿವರಿಸಿದರು. ಅಲ್ಲದೆ POSCO ಹಾಗೂ POSH ಕಾಯ್ದೆಗಳ ಬಗ್ಗೆ ಶಿಕ್ಷಕರು ಅಚ್ಚರಿ ಪಡುವ ರೀತಿಯಲ್ಲಿ ವಿಸ್ತಾರವಾಗಿ ತಿಳಿಸುತ್ತ ಕೆಲವು ಮಹತ್ವವಾದ ಎಚ್ಚರಿಕೆಗಳನ್ನು ಕೊಟ್ಟರು. ಕೊನೆಯಲ್ಲಿ ಶಿಕ್ಷಕರಲ್ಲಿರುವ ಸಂದೇಹಗಳನ್ನು ಪರಿಹರಿಸುತ್ತ ಕಾರ್ಯಾಗಾರವನ್ನು ಮುಕ್ತಾಯಗೊಳಿಸಿದರು.

 

 

 

 

ಶ್ರೀಮತಿ ಸುಷ್ಮಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ 

 

 

 

 

 

 

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]