July 02: ಎರಡು ತಿಂಗಳ ಬೇಸಿಗೆ ರಜೆಯ ನಂತರ ಎಲ್ಲಾ ಶಿಕ್ಷಕ/ಶಿಕ್ಷಕಿಯರು ಶಾಲೆಗೆ ತನ್ನದೇ ಆದ ವೈಯಕ್ತಿಕ ಯೋಚನೆ ಮತ್ತು ಸಮಸ್ಯೆಗಳಿಂದ ಕೂಡಿದ ಮನೋಭಾವದಿಂದ ಬಂದಿರುತ್ತಾರೆ. ಅವರಿಗೆ ಪುನರ್ ಉತ್ತೇಜನ ನೀಡುವ ಪ್ರಯತ್ನದ ಫಲವಾಗಿ ಪ್ರತಿ ವರ್ಷವೂ ನಮ್ಮ ಶಾಲೆಯಲ್ಲಿ ಶಿಕ್ಷಕರಿಗೆ ಪ್ರೋತ್ಸಾಹದಾಯಕವಾದ ಕಾರ್ಯಾಗಾರ ಏರ್ಪಡಿಸಲಾಗುತ್ತದೆ. ಅದರಂತೆ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ 22 ಜೂನ್ 2024 ರ ಶನಿವಾರದಂದು ಗೌರವಾನ್ವಿತ ಫಾದರ್ ವಿನ್ಸೆಂಟ್ ಪೆರೆರಾ ಅವರಿಂದ ಅದ್ಭುತವಾದ ಪ್ರೇರಣಾತ್ಮಕ ಕಾರ್ಯಾಗಾರ ನಡೆಯಿತು.

ಈ ಕಾರ್ಯಗಾರದಲ್ಲಿ ಬೆಥನಿ ಪ್ರೌಢ ಶಾಲೆ ಮತ್ತು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಭಾಗಿಯಾಗಿದ್ದು ಕಾರ್ಯಾಗಾರವು ಮೊಟ್ಟ ಮೊದಲು ದೇವರ ಆಶೀರ್ವಾದ ಬೇಡುವ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಶ್ರೀಮತಿ ಅರ್ಚನಾ ಅವರಿಂದ ಆಹ್ವಾನಿತ ಫಾದರ ವಿನ್ಸೆಂಟ್, ಈರ್ವರೂ ಮುಖ್ಯೋಪಾಧ್ಯಾಯನಿಯರು ಮತ್ತು ಎಲ್ಲ ಶಿಕ್ಷಕ ಬಳಗಕ್ಕೆ ಸ್ವಾಗತ ಕಾರ್ಯಕ್ರಮ ನೆರವೇರಿತು.

ಕಾರ್ಯಾಗಾರವು ನಾವು ಹಿಂದಿನ ಎಲ್ಲಾ ರೀತಿಯ ವಿಧಿ ವಿಧಾನ, ರೀತಿ, ಸಂಪ್ರದಾಯ, ಸಂಸ್ಕøತಿ, ಸಂಸ್ಕಾರಗಳನ್ನು ತೊರೆದು ಪ್ರಸ್ತುತ ಎಂಥ ಭಯಾನಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಹೇಳುತ್ತ ಇಂಥಹ ವಾತಾವರಣದಿಂದ ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರಾದವರು ಹೇಗೆ ನಿಭಾಯಿಸಬೇಕೆಂಬುದನ್ನು ಮಾರ್ಮಿಕವಾಗಿ ತಿಳಿಸಲಾಯಿತು.

ಮುಂದುವರೆದು ಶಿಕ್ಷಕರಿಗೆ ಕೆಲವು ಪ್ರಶ್ನೆಗಳನ್ನು ಕೊಟ್ಟು ಅದರ ಉತ್ತರಗಳನ್ನು ಬರೆಸಿ ಅವುಗಳಲ್ಲಿರುವ ಸಮಸ್ಯೆಗಳನ್ನು ಹೇಗೆ ನಿವಾರಿಸಬೇಕೆಂದು ಪ್ರಾಯೋಗಿಕವಾಗಿ ತಿಳಿಸಲಾಯಿತು. ಅಲ್ಲದೆ ಶಿಕ್ಷಕರಲ್ಲಿ ನಾಲ್ಕು ಗುಂಪುಗಳಾಗಿ ಮಾಡಿ ಕೆಲವು ಚಟುವಟಿಕೆಗಳನ್ನು ನೀಡಿ ಒಂದು ಸಂಸ್ಥೆಯ ಯಶಸ್ಸಿಗೆ ಪ್ರತಿಯೊಬ್ಬರೂ ಕೂಡ ಪ್ರಮುಖರಾಗಿರುತ್ತಾರೆ ಎಂದು ವಿವರಿಸುತ್ತ ಶಿಕ್ಷಕರಿಗೆ ಪ್ರತಿ ತಿಂಗಳ ಕೊನೆಯ ಶನಿವಾರ ಸಭೆ ನಡೆಸಿ ನಿಮ್ಮಲ್ಲಿರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ವಿಧಾನಗಳನ್ನು ತಿಳಿಸುತ್ತ ಎಲ್ಲರ ಮೇಲೆ ದೇವರ ಕೃಪಾಶಿರ್ವಾದಗಳನ್ನು ಬೇಡುತ್ತ ಕಾರ್ಯಾಗಾರವನ್ನು ಮುಕ್ತಾಯಗೊಳಿಸಿದರು.

 

 

 

 

 

 

 

ಶ್ರೀಯುತ ದೇವಪ್ಪ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ 

 

 

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]