August 08: ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ, ರೋಸಾ ಮಿಸ್ತಿಕಾ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ 2024-2025ನೇ ಸಾಲಿನ ಶಿಕ್ಷಕರ ಪುನಃಶ್ಚೇತನ ಕಾರ್ಯಗಾರವು ದಿನಾಂಕ 22/06/2024 ಶನಿವಾರದಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಬೆಥನಿ ವಿದ್ಯಾ ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಮತ್ತು ಜನರಲ್ ಕೌನ್ಸಿಲರ್ ಆಗಿರುವ ವಂ. ಭ. ಡಾ. ಮಾರಿಯೇಟ್ ರವರು ಬೆಥನಿ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾಗಿರುವ ವಂ. ಗುರು ರೇಮಂಡ್ ಪ್ರಾಸ್ಸಿಸ್ ಕಮಿಲಸ್ ಮಸ್ಕರೇನ್ಹಸ್ ರವರ ಜೀವನ ಚರಿತ್ರೆ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಚಿಂತೆನೆಗಳ ಬಗೆಗಿನ ದೂರದೃಷ್ಟಿತ್ವ ಮತ್ತು ಬೆಥನಿ ಸಂಸ್ಥೆಯ ಗುರಿ, ಧ್ಯೇಯೋದ್ದೇಶ ಮತ್ತು ಮೌಲ್ಯಗಳ ಬಗ್ಗೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಸಂಸ್ಥಾಪಕರ ಚಿಂತನೆ ಮತ್ತು ಆದರ್ಶಗಳನ್ನು ಶಿಕ್ಷಕರು ತಮ್ಮ ಬೋಧನೆಯಲ್ಲಿ ಅಳವಡಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು. ಮಾತ್ರವಲ್ಲದೆ ಶಿಕ್ಷಕರು ಸಂಸ್ಥಾಪಕರವರ ಆದರ್ಶಗಳನ್ನು ಮತ್ತು ಮೌಲ್ಯಗಳನ್ನು ಮ್ಯೆಗೂಡಿಸಿಕೊಳ್ಳಬೇಕು ಎಂದು ಕರೆನೀಡಿದರು. ರೋಸಾಮಿಸ್ತಿಕಾ ಕಾವ್ವೇಟಿನ ಮುಖ್ಯಸ್ಥರು, ರೋಸಾಮಿಸ್ತಿಕಾ ಸಮೂಹಸಂಸ್ಥೆಗಳ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಬಜಪೆ ಲಿಟ್ಲ್ ಪ್ಲವರ್ ಮತ್ತು ಕಿನ್ನಿಗೋಳಿ ಮೇರಿವೆಲ್ ಶಾಲೆಯ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ರೋಸಾಮಿಸ್ತಿಕಾ ಸಮೂಹಸಂಸ್ಥೆಗಳ ಸಂಚಾಲಕರಾಗಿರುವ ವಂ. ಭ. ರೋಸ್ಲಿಟರವರು ಸ್ವಾಗತಿಸಿದರು, ರೋಸಾಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ ವೀಣಾ ಬೆನ್ನಿಸ್ ರವರು ವಂದಿಸಿದರು. ಬೆಥನಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಕುಮಾರಿ ಗ್ಲೆನ್‍ಸಿಯಾವರು ಕಾರ್ಯಕ್ರಮವನ್ನು ನಿರೂಪಿಸಿದರು.

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]