August 29: ದಿನಾಂಕ 15.08.2024ರ ಗುರುವಾರದಂದು ಬೆಳಿಗ್ಗೆ 7.45 ನಿಮಿಷಕ್ಕೆ ಸರಿಯಾಗಿ ಶಿಶುವಿಹಾರ ಮತ್ತು ಬೆಥನಿ ಪ್ರೌಢ ಶಾಲೆಗಳೆರಡೂ ಒಟ್ಟಿಗೆ ಸೇರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು. ಈ ದಿನ ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಳಾಗಿ ಸೈನಿಕರಾದ ಶ್ರೀಯುತ ಶಿವಶರಣರವರು ಆಗಮಿಸಿದ್ದರು. ಪ್ರಸ್ತುತ ಇವರು ಕಾಶ್ಮೀರದ ಕಾರ್ಗಿಲ್‍ನ ಕೇಂದ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಿಸ್ಟರ್ ಸ್ಯಾಂಡ್ರಾ ಹಾಗೂ ಅತಿಥಿಗಳಾಗಿ ಎರಡೂ ಶಾಲೆಯ ಮುಖ್ಯೋಪಾಧ್ಯಾಯನಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವು ಮೊದಲಿಗೆ ಪ್ರಾರ್ಥನೆ, ಸ್ವಾಗತ, ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಲಾಯಿತು. ಮಕ್ಕಳಿಂದ ದೇಶಭಕ್ತಿಗೀತೆ, ಭಾಷಣ ಹಾಗೂ ನೃತ್ಯದ ಮೂಲಕ ಸ್ವಾತಂತ್ರ್ತ್ಯ ದಿನಾಚರಣೆಯನ್ನು ವಿಜೃಂಭಣೆಯಾಗಿ ಆಚರಿಸಲಾಯಿತು. ವಿಶೇಷ ಅತಿಥಿಗಳಾಗಿ ಅಹ್ವಾನಿತರಾದ ಶ್ರೀಯುತ ಶಿವಶರಣ ಅವರು ಮಕ್ಕಳನ್ನುದ್ದೇಶಿಸಿ ದೇಶಭಕ್ತಿಯನ್ನು ಕೇವಲ ಹಾಡುವುದರ ಮೂಲಕ, ಭಾಷಣ ಮಾಡುವುದರ ಮೂಲಕ ಅಷ್ಟೇ ಅಲ್ಲದೆ, ಇಂದಿನ ಮಕ್ಕಳು ದೇಶಸೇವೆಗಾಗಿ ಕಾಯರ್ಯೋನ್ಮುಖರಾಗಬೇಕೆಂದು ಮಕ್ಕಳಲ್ಲಿ ಪ್ರೋತ್ಸಾಹ ತುಂಬಿದರು. ಸಿಸ್ಟರ್ ಸ್ಯಾಂಡ್ರಾರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಹೇಳಿದರು. ಕೊನೆಗೆ ಶ್ರೀಮತಿ ಸುಷ್ಮಾರವರ ವಂದರ್ನಾಣೆಯ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

 

 

 

 

 

 

 

ಶ್ರೀಯುತ ದೇವಪ್ಪ, ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]