Sep 11: ಶಿಕ್ಷಕರ ಪೆÇೀಷಕರ ಸಭೆ ದಿನಾಂಕ 04.09.2024 ರಂದು 10.30ಕ್ಕೆ ಸರಿಯಾಗಿ ನಮ್ಮ ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು ಈ ಸಭೆಯ ಅಧ್ಯಕ್ಷ ಸ್ಥಾನವನ್ನು ನಮ್ಮ ಸಂಸ್ಥೆಯ ಸಂಚಾಲಕರಾದ ವಂ.ಭ. ರೋಸ್‍ಲಿಟರವರು ವಹಿಸಿದ್ದು ಪ್ರಾರ್ಥನ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ರೋನಾಲ್ಡ್ ಕಾರ್ಲೊರವರು ಸ್ವಾಗತಿಸಿದರು, ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ವಂ. ಧರ್ಮಗುರು ರೂಪೇಶ್ ಮಾಡ್ತಾರವರು ವಿದ್ಯಾರ್ಥಿ ಶಿಕ್ಷಕಿಯರ (ಜೀವನದಲ್ಲಿ ಪೆÇೀಷಕರ) ಭವಿಷ್ಯ ರೂಪಿಸುವಲ್ಲಿ ಪೆÇೀಷಕರ ಪಾತ್ರ ಇದರ ಕುರಿತು ಸೂಕ್ತ ಉದಾಹರಣೆಗಳ ಮೂಲಕ ಶಿಕ್ಷಣವು ಜ್ಞಾನದೊಂದಿಗೆ ಜೀವನವನ್ನು ಉತ್ತಮವಾಗಿ ಸಾಗಿಸಲು ಜೀವನ ಕೌಶಲಗಳನ್ನು ಬೆಳೆಸುವುದರ ಜೊತೆ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು ಶಿಕ್ಷೆಯ ಜೊತೆ ಜೊತೆ ಶಿಕ್ಷಣ ಜವಬ್ದಾರಿ ಇತ್ಯಾದಿಗಳನ್ನು ಜಾಗರುಕತೆಯಿಂದ ತಿಳಿಸಿಕೊಡುವುದು ಅಲ್ಲದೆ ಒಳ್ಳೆಯ ಆದರ್ಶ ವ್ಯಕ್ತಿಯಾಗಿ ಅವರನ್ನು ರೂಪಿಸುವುದು ಹೆತ್ತವರ/ಪೆÇೀಷಕರ ಜವಬ್ದಾರಿಯಾಗಿದೆ ಎಂಬುದನ್ನು ಸವಿವರವಾಗಿ ತಿಳಿಸಿದರು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಲವೀನ ಲೋಬೊರವರು ಸಂಸ್ಥೆಯ ನೀತಿನಿಯಮ ಹಾಗೂ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳ ಕುರಿತು ಪೆÇೀಷಕರಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಹಿಸಿದ ವಂ. ಭ. ರೋಸ್‍ಲಿಟರವರು ಸಂಸ್ಥೆಯು ಉತ್ತಮ ಪಥದಲ್ಲಿ ಸಾಗಲು ಪೆÇೀಷಕರ/ ಹೆತ್ತವರ ಸಹಕಾರ ಸ್ಮರಿಸುತ್ತ ಎಲ್ಲಾರಿಗೂ ಶುಭಹಾರೈಸಿದರು, ವಿದ್ಯಾರ್ಥಿ ಶಿಕ್ಷಕಿಯರು ತಮ್ಮ ಅನುಭವವನ್ನು ಹಂಚಿದರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಣೆಯನ್ನು ಉಪನ್ಯಾಸಕರಾದ ಶ್ರೀಮತಿ ವೀಣಾಬೆನ್ನಿಸ್ ರವರು ನೆರವೇರಿಸಿದರು, ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕರಾದ ಶ್ರೀಮತಿ ಜಾಸ್ಮಿನ್ ಮೊರಾಸ್ ರವರು ಮಾಡಿದರು. ರಾಷ್ಟಗೀತೆಯೊಂದಿಗೆ ಬೋಜನ ಸೇವನೆಯ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.
ಶ್ರೀಮತಿ ಲವೀನ ಲೋಬೊ, ಸಂಸ್ಥೆಯ ಪ್ರಾಂಶುಪಾಲರು
ರೋಸಾಮಿಸ್ತಿಕ ಶಿಕ್ಷಕಿಯರ ತರಬೇತಿ ಸಂಸ್ಥೆ, ಕಿನ್ನಿಕಂಬಳ