Dec 03: ಕರ್ನಾಟಕ ಜಾನಪದ ಪರಿಷತ್ತು (ರಿ) ಬೆಂಗಳೂರು ತಾಲೂಕ ಘಟಕ ಚಿತ್ತಾಪೂರ ವತಿಯಿಂದ ‘ಶಾಲಾ ಕಾಲೇಜಿಗೊಂದು ಜಾನಪದ ಕಲರವ’ ಎಂಬ ಕಾರ್ಯಕ್ರಮ ಬೆಥನಿ ಪ್ರೌಢ ಶಾಲೆಯಲ್ಲಿ ದಿನಾಂಕ 30.11.2024ರ ಶನಿವಾರದಂದು ಬೆಳಿಗ್ಗೆ 10.30ಕ್ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕವಿತಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಗಿ, ಶ್ರೀಯುತ ದೇವಪ್ಪ ಸರ್ ಅವರಿಂದ ಸ್ವಾಗತ ಭಾಷಣ ನೆರವೇರಿತು. ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಮಲ್ಲಿಕಾರ್ಜುನ ಸೇಡಂ ಇವರು ಉದ್ಘಾಟಕರಾಗಿ ಉದ್ಘಾಟನಾ ಭಾಷಣ ಮಾಡಿದರು. ಕಾರ್ಯಕ್ರಮದ ಉದ್ಧೇಶವನ್ನು ಕುರಿತು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ನಾಗಯ್ಯ ಸ್ವಾಮಿ ಅಲ್ಲೂರ ಅವರು ತಿಳಿಸಿ ಹೇಳಿದರು.

ಕಾರ್ಯಕ್ರಮದ ವಿಶೇಷತೆ ಎಂದರೆ ಸ್ಥಳೀಯ ಜಾನಪದರಿಂದ ಜಾನಪದ ಕಲೆಗಳ ಪ್ರದರ್ಶನ ನಡೆಸಲಾಯಿತು. ಜಾನಪದ ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಜಾನಪದ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ನರಸಪ್ಪ ಚಿನ್ನಕಟ್ಟಿ ಅವರು ಅರ್ಥಪೂರ್ಣ ಉಪನ್ಯಾಸವನ್ನು ನೆರವೇರಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಿಸ್ಟರ್ ಕವಿತಾ ಅವರು ಜಾನಪದ ಸಾಹಿತ್ಯದ ಅರ್ಥ, ಮಹತ್ವ, ಅದರ ಉಳಿಕೆ, ಬೆಳವಣಿಗೆ ಬಗ್ಗೆ ಹಲವಾರು ಮಹತ್ವದ ವಿಷಯಗಳನ್ನೊಳಗೊಂಡ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.

ಶ್ರೀಯುತ ವಿಶ್ವನಾಥ ಸರ್ ಅವರ ವಂದನಾರ್ಪಣಾ ನುಡಿಗಳಿಂದ ಕಾರ್ಯಕ್ರಮ ಮುಕ್ತಾಯವಾಯಿತು.

 

 

 

 

 

 

ಶ್ರೀಮತಿ ಅರ್ಚನಾ, ಸಹಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ 

 

 

 

 

 

 

 

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]