July 1: ವಾಮಂಜೂರಿನ ಸೈಂಟ್ ರೇಮಂಡ್ಸ್ ಪ್ರೌಢಶಾಲಾ ಕನ್ನಡ ಅಧ್ಯಾಪಕ ರಾಂ ಎಲ್ಲಂಗಳ ಎಂಬ ಕಾವ್ಯನಾಮ ಹೊಂದಿರುವ ರಾಮರಾಯ ಶ್ಯಾನುಭೋಗ್ ಅವರು ಬರೆದ ‘ಬಹುಮಾನ’ ಎಂಬ ಮಕ್ಕಳ ನಾಟಕ ಸಂಕಲನಕ್ಕೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ 2013ನೇ ಸಾಲಿನ ‘ಮಕ್ಕಳ ಚಂದಿರ’ ಪುಸ್ತಕ ಪ್ರಶಸ್ತಿ ಲಭಿಸಿದೆ. ಇತ್ತೀಚಿಗೆ ಧಾರವಾಡದಲ್ಲಿ ನಡೆದ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಮಕ್ಕಳ ಚಂದಿರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಕೃತಿಗೆ 2014ರಲ್ಲಿ ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನದ ದತ್ತಿ ಪುರಸ್ಕಾರವೂ ಲಭಿಸಿತ್ತು. ಈ ಸಂಕಲನದಲ್ಲಿರುವ ಪ್ಲಾಸ್ಟಿಕೋಪಾಖ್ಯಾನ ಎಂಬ ನಾಟಕವು ಪ್ರಸ್ತುತ ಕೇರಳ ಸರ್ಕಾರದ 8ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಪಠ್ಯವಾಗಿರುವುದು. ಇವರು ಬರೆದ ‘ಗೋಡೆಡುದಿತಿನ ಗಣಪೆ’ ತುಳು ನಾಟಕಕ್ಕೆ 2016ನೇ ಸಾಲಿನ ಧರ್ಮಸ್ಥಳ ರತ್ನವರ್ಮ ಹೆಗಡೆ ಪ್ರಶಸ್ತಿ ಲಭಿಸಿತ್ತು. 2014ರಲ್ಲಿ ‘ತುಳುವಪ್ಪೆ ಮಗಲ್ ತುಳಸಿ’ ಮತ್ತು 2015ನೇ ಸಾಲಿನಲ್ಲಿ ‘ಪಡಿಲ್ ಭೂಮಿದ ಕತೆ’ ಕೃತಿಗೂ ಈ ಪ್ರಶಸ್ತಿ ಲಭಿಸಿತ್ತು.
ರಾಂ ಎಲ್ಲಂಗಳ ಅವರಿಗೆ ಹಾರ್ದಿಕ ಅಭಿನಂದನೆಗಳು.
ರಿಚರ್ಡ್ ಅಲ್ವಾರಿಸ್, ಅಧ್ಯಾಪಕ
ಸೈಂಟ್ ರೇಮಂಡ್ಸ್ ಪ್ರೌಢಶಾಲೆ, ವಾಮಂಜೂರು