March 30: ಪೂರ್ವಾಹ್ನ 9.30 ಕ್ಕೆ ಎಲ್ಲಾ ಮಕ್ಕಳು ಶಾಲಾ ಆವರಣದಲ್ಲಿ ಒಟ್ಟು ಸೇರಿದರು. ಸಹೋದಯ ಬೆಥನಿ ಸಮಾಜ ಕೇಂದ್ರ ಇಲ್ಲಿನ ಶ್ರೀಮತಿ.ನಳಿನಿ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲಾ ಮುಖ್ಯ-ಶಿಕ್ಷಕಿ ಸಿ|| ಮರ್ಸಿನ್ ರವರು ಆಗಮಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿದರು. ತದನಂತರ ಮಕ್ಕಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಪ್ರತಿ ಗುಂಪಿಗೆ ಮೂವರು ಸಂಪನ್ಮೂಲ ವ್ಯಕ್ತಿಗಳು ಜವಾಬ್ದಾರಿ ವಹಿಸಿಕೊಂಡರು. ಇವರಿಗೆ ಸಹಾಯಕರಾಗಿ ತರಗತಿ ಶಿಕ್ಷಕರು ಪಾಲುಗೊಂಡರು.
     

ಮೊತ್ತಮೊದಲಾಗಿ ಸಂಪನ್ಮೂಲ ವ್ಯಕ್ತಿಗಳು ತಮ್ಮ ಪರಿಚಯ ಮಾಡಿಕೊಟ್ಟರು. ಬಳಿಕ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿಗೆ ವಿವಿಧ ರೀತಿಯ ಜವಾಬ್ದಾರಿ ನೀಡಿದರು. ಬಳಿಕ ಮಕ್ಕಳಿಗೆ ಪತ್ರಿಕೆಗಳನ್ನು ನೀಡಿ, ಅದರಲ್ಲಿ ಸೂಚಿಸಿದ ಆಕೃತಿಗಳನ್ನು ರಚಿಸಲು ತಿಳಿಸಿದರು. ಎಲ್ಲಾ ಮಕ್ಕಳು ಅದನ್ನು ಪ್ರದರ್ಶಿಸಿ, ಸಂತೋಷಪಟ್ಟರು. ಮುಂದೆ ಗುಂಪಿನಿಂದ, ಮಕ್ಕಳಿಂದ ಹಾಡು, ಕಥೆ ಅಭಿನಯ ಗೀತೆ ಹಾಡಿಸಿದರು. ಪ್ರತಿ ಗುಂಪಿಗೆ ನಿರ್ದಿಷ್ಟ ಕೆಲವು ವಿಷಯ ಕೊಟ್ಟು ಅದರ ಬಗ್ಗೆ ಬರೆದು ಮುಂದೆ ಬಂದು ವಿಷಯ ಮಂಡಿಸಲು ತಿಳಿಸಿದರು. ಈ ಎಲ್ಲಾ ಚಟುವಟಿಕೆಗಳಿಗೆ ಗುಂಪುವಾರು ಬಹುಮಾನವನ್ನು ಮೀಸಲಿಟ್ಟದ್ದರು. ಬೆಥನಿ ಸಹೋದಯ ಸೇವಾ ಕೇಂದ್ರದ ಸಂಯೋಜಕಿಯಾದ ಸಿ|| ಮಿಶಲ್ ರವರು ಮಕ್ಕಳಿಗೆ, ಮಕ್ಕಳ ಹಕ್ಕು ಹಾಗೂ ‘Good touch and bad touch’  ಇದರ ಬಗ್ಗೆ ಅರಿವು ಮೂಡಿಸಲು, ತಿಳುವಳಿಕೆಯನ್ನು ನೀಡಿದರು. ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಂದಲೇ ವಿಷಯವನ್ನು ಸಂಗ್ರಹಿಸಿ, ಅದರ ಬಗ್ಗೆ ತಿಳುವಳಿಕೆ ಕೊಟ್ಟರು ಮಾತ್ರವಲ್ಲ ಇದರ ಸಾಧಕ- ಭಾದಕದ ಬಗ್ಗೆಯೂ ತಿಳಿಸಿದರು.
       
ಕೊನೆಯದಾಗಿ ವಿಜೇತರಾದ ತಂಡದವರಿಗೆ ಬಹುಮಾನ ನೀಡಿದರು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Sr Mercine BS, Headmistress
St Sebestian HPS, Bendur

 

 

 

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]