Aug 08: 8, 9 ಮತ್ತು10ನೇ ತರಗತಿಯ ಮಕ್ಕಳ ಪಾಲಕರನ್ನು ಕರೆದು ಅವರ ಮಕ್ಕಳನ್ನು ಅಭಿವೃದ್ದಿ ಪಡಿಸುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸಲು, ಹಾಗೂ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಸೇರಿ ಜೊತೆಗೂಡಿ ಮಾಡುವ ಪ್ರಯತ್ನದಿಂದ ಅಭಿವೃದ್ದಿ ಸಾಧ್ಯ ಆದ್ದರಿಂದ ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿಯರ ಸಲಹೆ ಹಾಗೂ ಮಾರ್ಗದರ್ಶನದ ಮೂಲಕ ದಿ: 08.07.2017 ರಂದು 8ನೇ ತರಗತಿಯ ಪಾಲಕರ ಸಭೆ, ದಿ.01.08.2017 ರಂದು 9ನೇ ತರಗತಿಯ ಪಾಲಕರ ಸಭೆ ಮತ್ತು ದಿ: 04.08.2017 ರಂದು 10ನೇ ತರಗತಿಯ ಪಾಲಕರ ಸಭೆಯನ್ನು  ಕರೆದು, ಈ ವಿಷಯದಲ್ಲಿ ಪರಿಣಿತ ಹೊಂದಿದ ಉಪನ್ಯಾಸಕರನ್ನು ಕರೆದು ಒಂದು ವಿಶೇಷವಾದ ಮಾಹಿತಿಯನ್ನು ನೀಡುವಂತಹ ಕಾರ್ಯವನ್ನು ನಮ್ಮ ಶಾಲೆಯಲ್ಲಿ ನಡೆಸಲಾಯಿತು.  ಈ ಸಭೆಯಿಂದ ಪಾಲಕರಾದವರು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವಲ್ಲಿ ತಾವು ಯಾವ ಯಾವ ರೀತಿಯ ನಿಯಮವನ್ನು ಪಾಲಿಸಬೇಕು ಎಂಬುವುದನ್ನು ಮನವರಿಕೆ ಮಾಡಿಕೊಂಡರು ಹಾಗೂ ಶಿಕ್ಷಕರಾದವರಿಗೂ ಕೂಡ ಎಲ್ಲಾ ಮಕ್ಕಳ ಅಭಿವೃದ್ದಿ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಉಪನ್ಯಾಸಕರು ಮನವರಿಕೆ ಮಾಡಿಸಿದರು.                
ಒಟ್ಟಾರೆಯಾಗಿ ಶಿಕ್ಷಕರು ಮತ್ತು ಪಾಲಕರು ಒಟ್ಟು ಸೇರಿದರೆ ಮಕ್ಕಳ ಅಭಿವೃದ್ದಿ ಸಾಧ್ಯವೆಂಬುವುದು ಮನವರಿಕೆ ಮಾಡಿದರು.

Kavitha BS, Headmistress
Bethany HS, Chithapur

 

 

 

 

 

 

 

<

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]