Sep 11: ಕೆಸಾಪ್ಟ ಆಪ್ತ ಸಮಾಲೋಚಕರಾದ ಶ್ರೀ ಮಚೇಂದ್ರ ವಿ ಕಲಕೇರಿ ಅವರು ನಮ್ಮ ಶಾಲೆಗೆ ಭೇಟಿ ನೀಡಿ ಹದಿ ಹರೆಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಆರೋಗ್ಯ ಶಿಕ್ಷಣ (ADOLESCENCE EDUCATION PROGRAMME) ಕಾರ್ಯಕ್ರಮದಡಿಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ HIV ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀ ಮಚೇಂದ್ರ ಮತ್ತು ಅವರ ಬಳಗದವರನ್ನು ಶಾಲಾ ಮುಖ್ಯ ಗುರುಗಳಾದ ಸಿಸ್ಟರ ಕವಿತಾರವರು ಹೂಗುಚ್ಚವನ್ನು ನೀಡಿ ಸ್ವಾಗತಿsಸಿದರು.
ಶ್ರೀ ಮಚೇಂದ್ರ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಆರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಹೇಳಿದರು. ಮುಖ್ಯವಾಗಿ ಮಾರಕ ರೋಗ HIV (Aids) ರೋಗದ ಬಗ್ಗೆ ಮಾಹಿತಿ ನೀಡಿ ಅದು ಹರಡುವ ವಿಧಾನಗಳು ಹಾಗು ಅದನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿಸಿದರು.
Sr Kavitha BS, Headmistress
Bethany HS, Chittapur