December 15: ದಿನಾಂಕ 12.12.2017 ರಂದು ಕೆ.ಆರ್ ನಗರ ಪಟ್ಟಣದಲ್ಲಿ, ಪುರಸಭೆ ಜ್ಞಾನ ಚಿಗುರು ಸಂಪನ್ಮೂಲ ಕೇಂದ್ರ ಮತ್ತು ಸಂತಜೋಸೆಫರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ, ಏರ್ಪಡಿಸಿದ್ದ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮದಲ್ಲಿ, ಸಾರ್ವಜನಿಕರಿಗೆ ಸ್ವಚ್ಚ ಸರ್ವೇಕ್ಷಣೆ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ತಿಳುವಳಿಕೆ ನೀಡಲು, ಪಟ್ಟಣದಾದ್ಯಂತ ಪ್ರಚಾರ ಮಾಡಿ ನಗರವನ್ನು ಸ್ವಚ್ಚವಾಗಿಡಲು ಸಹಕರಿಸುವುದರ ಜೊತೆಗೆ “ಸ್ವಚ್ಚತಾ ಆಫ್” ಡೌನ್‍ಲೋಡ್ ಮಾಡಿಕೊಂಡು ಸ್ವಚ್ಚತೆಗೆ ಸಂಬಂಧಿಸಿದಂತೆ ದೂರು ದಾಖಲಿಸಿ, ಎಂಬ ಅರಿವನ್ನು ಸುಮಾರು 350 ಕ್ಕೂ ಹೆಚ್ಚು ಮಕ್ಕಳು ಜಾಥಾ ನಡೆಸಿ ಘೋಷಣೆ ಕೂಗುತ್ತಾ ಸಾರ್ವಜನಿಕರ ಗಮನವನ್ನು ಸೆಳೆದರು.
ಜಾಥಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಕವಿತಾ ವಿಜಯಕುಮಾರ್, ಬಿ.ಇ.ಓ. ರಾಜು ಮತ್ತು ಸಂತಜೋಸೆಫರ ಶಾಲೆಯ ಸಂಚಾಲಕಿಯವರಾದ ಸಿಸ್ಟರ್. ಸೈಮನ್, ಮುಖ್ಯಶಿಕ್ಷಕಿಯವರಾದ ಸಿಸ್ಟರ್ ಬೆಟ್ಟಿ ಮತ್ತು ಶಾಲಾ ಶಿಕ್ಷಕವೃಂದದೊಂದಿಗೆ, ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ, ಸದಸ್ಯರಾದ ಕೆ.ಎಲ್. ಜಗದೀಶ್, ರಾಜ ಶ್ರೀಕಾಂತ್, ಪರಿಸರ ಎಂಜಿನಿಯರ್ ರೂಪ ಎಲ್. ಜ್ಞಾನ ಚಿಗುರು ಸಂಪನ್ಮೂಲ ಕೇಂದ್ರದ ಸ್ವಚ್ಚಭಾರತ್ ಸಂಯೋಜಕ ಜಿ.ಎಸ್. ಜಗದೀಶ್ ಹಾಗೂ ಪುರಸಭಾ ಸಿಬ್ಬಂದಿಗಳು ಭಾಗವಹಿಸಿದರು.
ಪ್ರಶಾಂತ, ಸಹ ಶಿಕ್ಷಕರು
ಸಂತ ಜೋಸೆಫರ ಪ್ರೌಢಶಾಲೆ, ಕೆ.ಆರ್.ನಗರ