Jan 18: ಸೇಂಟ್ ಮೈಕಲ್ಸ್ ಪ್ರೌಢ ಶಾಲೆಯಲ್ಲಿ ದಿನಾಂಕ 16.01.2018 ರಂದು ದಿವಂಗತ ಸರ್ ಗಾಣಿಗೇರವರ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಸಿಸ್ಟರ್ ರೆನಿಟಾರವರು ಸರ್ ಗಾಣಿಗೇರ್ ರವರ ಅಂತಿಮ ಯಾತ್ರೆಯ ದಿನವನ್ನು ನೆನೆಸಿಕೊಂಡು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಜನವರಿ 8ನೇ ತಾರೀಖಿನಂದು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿ ಮನೆಗೆ ತೆರಳಿದ ಅವರು ಸಂಜೆ ಸುಮಾರು 5.30ಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವುದು ನಮಗೆಲ್ಲರಿಗೂ ಆಘಾತಕಾರಿಯಾದ ಅರಗಿಸಿಕೊಳ್ಳಲಾಗದ ತುತ್ತಾಗಿದ್ದು ನಮ್ಮ ಶಾಲೆಗೆ ಭರಿಸಲಾಗದ ನಷ್ಟವುಂಟಾಗಿದೆ ಅವರಿಲ್ಲದೆ ಇಂದು ನಮ್ಮ ಮಾತುಗಳು ಬಡವಾಗಿವೆ.
ಸರ್ ಗಾಣಿಗರವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಆಡುಮುಟ್ಟದ ಸೊಪ್ಪಿಲ್ಲ ನಮ್ಮ ಗಾಣಿಗೇರ್ ಗುರುಗಳಲ್ಲಿ ಇರದ ಗುಣಗಳಿಲ್ಲ ಸಹನೆ, ದೀನತೆ, ಕರುಣೆ, ಶಾಂತಿ ಪ್ರೇಮಗಳಿಂದ ತುಂಬಿದ ಇವರು ಎಲ್ಲರಿಗೂ ಆತ್ಮೀಯರು ಆಗಿದ್ದರು. ಹಿರಿಯ ಗುರುಗಳಾಗಿ, ಸ್ನೇಹಿತರಾಗಿ ಪ್ರೀತಿಯ ಒಡನಾಟದಿಂದ ನಮಗೆಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ನಮ್ಮ ಬೆಥನಿ ವಿದ್ಯಾ ಸಂಸ್ಥೆಯ ಕಲಶಗಳಲ್ಲಿ ಒಂದಾಗಿದ್ದ ಸರ್. ಗಾಣಿಗೇರ್‍ರವರು ಇಂದು ನಮ್ಮ ಮಧ್ಯೆ ದೈಹಿಕವಾಗಿ ಇಲ್ಲದಿದ್ದರೂ ಅವರ ಆದರ್ಶಗಳು, ವ್ಯಕ್ತಿತ್ವದ ಪ್ರಭಾವಗಳು ನಮ್ಮ ಮಧ್ಯೆ ಜೀವಂತವಾಗಿ ಉಳಿದುಕೊಂಡಿವೆ. ಇಂದು ಅವರ ಅಗಲುವಿಕೆಯಿಂದ ಅತ್ಯಂತ ದುಃಖತಪ್ತರಾದ ಅವರ ಪತ್ನಿ, ಮಕ್ಕಳು ಮತ್ತು ಬಂಧುಮಿತ್ರರಿಗೆ ಸರ್ವಶಕ್ತ ದೇವರು ಆತ್ಮಶಕ್ತಿ ಸ್ಥೈರ್ಯ ಹಾಗೂ ಸಾಂತ್ವನವನ್ನು ನೀಡಲಿ ಎಂದು ಪ್ರ್ರಾರ್ಥಿಸುತ್ತೇವೆ ಹಾಗೂ ನಮ್ಮ ಪ್ರೀತಿಯ ಸರ್ ಗಾಣಿಗೇರವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇವೆ.
ಪ್ರೀತಿಯ ಸರ್ ಗಾಣಿಗೇರ್‍ರವರೇ
ಆದರ್ಶಗುರುಗಳಾಗಿ ಪ್ರೀತಿಯ ಸಹೋದರನಾಗಿ
ನಮಗೆಲ್ಲರಿಗೂ ಮಾರ್ಗದರ್ಶನ ನೀಡಿದಿರಿ
ಸಾವಿರಾರು ವಿದ್ಯಾರ್ಥಿಗಳ ಜ್ಞಾನದ ದಾಹ ನೀಗಿಸಿ
ಜೀವನದ ಪಾಠ ಕಲಿಸಿದಿರಿ
ಆದರ್ಶ ಪತಿಯಾಗಿ, ಪ್ರೀತಿಯ ತಂದೆಯಾಗಿ
ಕುಟುಂಬದ, ಸಮಾಜದ ಹಾಗೂ ಶಾಲೆಗಳ
ಜವಬ್ದಾರಿಗಳನ್ನು ಹೊತ್ತು
ಎಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿರಿ
ಇದೋ ನಿಮಗೆ ನಮ್ಮ ನಮನÀಗಳು
ಭಗವಂತನ ಶ್ರೀರಕ್ಷೆ ನಿಮ್ಮ ಕುಟುಂಬದ ಮೇಲೆ ನೆಲೆಸಲಿ ನಿಮ್ಮ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ
ಸೇಂಟ್ ಮೈಕಲ್ಸ್ ಪ್ರೌಢ ಶಾಲೆಯ ಆಡಳಿತ ಮಂಡಳಿ
ಮುಖೋಪಾದ್ಯಾಯನಿಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು