June 26: ದಿನಾಂಕ 23.06.2018 ರಂದು ಬೆಥನಿ ಪ್ರೌಢ ಶಾಲೆ, ಚಿತ್ತಾಪೂರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಗುರುಗಳಾದ ಸಿ.ಕವಿತಾ ಬಿಎಸ್, ಮಕ್ಕಳು ತಮ್ಮ ಪಾಠದ ಜೊತೆ ನಿತ್ಯ ಯೋಗವನ್ನು ರೂಢಿಸಿಕೊಳ್ಳಬೇಕು. ಶಿಕ್ಷಣವು ಮಕ್ಕಳ ಭವಿಷ್ಯ ರೂಪಿಸಿದರೆ, ಯೋಗವು ಒಳ್ಳೇಯ ಆರೋಗ್ಯ ನೀಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಮನೆಯ ಪರಿಸರವನ್ನು ಹಾಳು ಮಾಡದಂತೆ ಗಿಡಗಳನ್ನು ನೆಟ್ಟು ಇತರರಿಗೂ ಪರಿಸರ ಸಂರಕ್ಷಿಸಲು ತಿಳಿ ಹೇಳಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎನ್ನುವುದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಂದೇಶವನ್ನಿತ್ತರು.

ವಿದ್ಯಾರ್ಥಿಗಳು ಪ್ರತಿದಿನ 30 ನಿಮಿಷದಿಂದ ಒಂದು ಗಂಟೆಯ ಸಮಯವನ್ನು ಪಾಠದ ಜೊತೆ ಯೋಗಕ್ಕಾಗಿ ಮೀಸಲಿಟ್ಟಲ್ಲಿ ಎಲ್ಲಾ ಕಾಯಿಲೆಗಳಿಂದ ಮುಕ್ತಿ ಪಡೆದು ಬುದ್ದಿ ಚುರುಕಾಗುವುದು ಎಂದು ಹೇಳಿದರು.

 

 

 

 

Sr Kavitha BS, Headmistress
Bethany High School, Chittapur

 

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]