ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲೆ, ಕುಲಶೇಖರ ಶಾಲೆಯ 2018-19ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಶಾಲಾ ಸಭಾಂಗಣದಲ್ಲಿ ದಿನಾಂಕ 29-06-2018ರಂದು ಜರುಗಿತು.
ಮುಖ್ಯೋಪಾಧ್ಯಾಯಿನಿ ವಂ.ಭ. ಸಿಂತಿಯಾ ಡಿ ಕುನ್ಹಾ ಸ್ವಾಗತಿಸಿ ,ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ, ವಂ.ಭ. ಮಾರಿಯೋಲಾರವರು, ವಿದ್ಯೆಯಿಂದ ನಮ್ಮ ಜೀವನದಲ್ಲಿ ಮಹತ್ಕಾರ್ಯಗಳನ್ನು ಮಾಡಲು ಸಾಧ್ಯ. ಶಿಸ್ತು, ತಿಳುವಳಿಕೆ, ಬುದ್ಧಿವಂತಿಕೆ ಮತ್ತು ನಿರಂತರ ಪ್ರಯತ್ನದಿಂದ ವಿದ್ಯಾರ್ಥಿಗಳು ಸಫಲರಾಗುತ್ತಾರೆ ಎಂದು ನುಡಿದರು. ನೂತನ ಉಪಾಧ್ಯಕ್ಷರಾದ ಶ್ರೀ ರಿಚ್ಚರ್ಡ್ ವಾಲ್ಟರ್ ಡಿ ಸೋಜ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಪೋಷಕರ ಹಾಗೂ ಶಿಕ್ಷಕರ ಪರಿಶ್ರಮದಿಂದ ಸತ್ಪ್ರಜೆಯಾಗಿ ಉತ್ತಮ ಭಾರತವನ್ನು ರೂಪಿಸಬಲ್ಲರು. ಮಕ್ಕಳ ಮನಸ್ಸು ನಿಷ್ಕಳಂಕ. ಬೆಳೆಯುತ್ತಿರುವಂತೆ ಮಕ್ಕಳಿಗೆ ದುರಾಲೋಚನೆ ಬರುವುದು ಸಹಜ. ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಮಾತ್ರ ಇಂಥಹ ದುರಾಲೋಚನೆಗಳನ್ನು ದೂರವಾಗಿಸಬಹುದು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ಶಿಕ್ಷಕರಿಗಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಯಲ್ಲಿ ಹೆತ್ತವರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು ಉಪನ್ಯಾಸಕರಾಗಿ ಶ್ರೀ ವಿನ್ಸೆಂಟ್ ಡಿ ಕೋಸ್ತ ಪ್ರಾಂಶುಪಾಲರು ರೋಟರಿ ವಿದ್ಯಾ ಸಂಸ್ಥೆ ಮೂಡಬಿದ್ರೆ ಇವರು ಆಗಮಿಸಿದರು. ಶ್ರೀಮತಿ ಪಾವ್ಲಿಯ ಪಾಯಸ್ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಗ್ರೇಸಿ ಪಿಂಟೊ ವಂದಿಸಿದರು.
Sr Cynthia D’Cunha, Headmistress
Sacred Hearts’ HS, Kulshekar