Aug 16: ದಿನಾಂಕ: 10.08.2018 ಶನಿವಾರದಂದು ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸಂಚಾಲಕಿಯವರಾದ “ಭಗಿನಿ ಸೈಮನ್” ಹಾಗೂ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿಯವರಾದ “ಭಗಿನಿ ಬೆಟ್ಟಿ ಡಿ’ಕೋಸ್ಟ”ರವರ ನೇತೃತ್ವದಲ್ಲಿ ಚರ್ಚಾ ಸ್ಪರ್ಧೆಯು ನಡೆಯಿತು.

ಈ ಸ್ಫರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ “ಪಠ್ಯೇತರ ಚಟುವಟಿಕೆಗಳು ಶಿಕ್ಷಣಕ್ಕೆ ಪೂರಕವೇ”, 9ನೇ ತರಗತಿ ವಿದ್ಯಾರ್ಥಿಗಳಿಗೆ “ವಾರ್ಷಿಕ ಪರೀಕ್ಷಾ ಪದ್ದತಿಯು ಶಿಕ್ಷಣಕ್ಕೆ ಪೂರಕವೇ” ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ “ಅಂತರ್ಜಾಲ ಬಳಕೆ ಶೈಕ್ಷಣಿಕ ಪ್ರಗತಿಗೆ ಪೂರಕವೇ” ಎಂಬ ವಿಷಯಗಳನ್ನು ನೀಡಲಾಗಿತ್ತು ಈ ಸ್ಪರ್ಧೆಯಲ್ಲಿ 90 ಮಕ್ಕಳು ಭಾಗವಹಿಸಿದ್ದರು. ಮಕ್ಕಳಲ್ಲಿ ವಿಷಯದ ಜ್ಞಾನ ಮತ್ತು ಮಾತನಾಡುವ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಈ ಚರ್ಚೆಯು ಸಹಕಾರಿಯಾಗುತ್ತದೆ. ಸ್ಪರ್ಧಾಳುಗಳು ಉತ್ತಮ ರೀತಿಯಲ್ಲಿ ಮಾತನಾಡಿ ಸ್ಪರ್ಧೆಯನ್ನು ಬಹಳ ಅರ್ಥಪೂರ್ಣವಾಗಿ ನಡೆಸಿಕೊಟ್ಟರು.

 

 

ರಶ್ಮಿ ಆರ್, ಸಹ ಶಿಕ್ಷಕರು,
ಸಂತ ಜೋಸೆಫರ ಪ್ರೌಢಶಾಲೆ, ಕೃಷ್ಣರಾಜನಗರ,

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]