Nov 29: ಸಪ್ಟೆಂಬರ್ 4 ಬೆಥನಿ ಶಿಕ್ಷಣ ಸಂಸ್ಥೆಗೆ ಅತ್ಯಂತ ಶುಭ ಸಂದರ್ಭ. ಈ ಸುಂದರ ನೆನಪಿಗೆ ಈಗ 75ನೇ ವರ್ಷದ ಅಮೃತ ಮಹೋತ್ಸವದ ಸಡಗರ. 1948 ರಿಂದ ಪ್ರಾರಂಭವಾಗಿ 2022ರ ತನಕ ನಮ್ಮ ಸಂಸ್ಥೆ ಸಾಗಿರುವುದು ಅತ್ಯಂತ ಹೆಮ್ಮೆಯ ವಿಷಯ. ಇಂತಹ ಅವಿಸ್ಮರಣೆಯ ಕ್ಷಣ ನಮ್ಮದಾಗಲೂ ವಂದನಿಯ ಗುರು ಆರ್ ಎಫ್ ಸಿ ಮಸ್ಕರೇನಸ್ ಅವರೊಂದಿಗೆ ಸಾವಿರಾರು ಬೆಥನಿ ಭಗಿನಿಯರು ತಮ್ಮ ತನು ಮನ ಧನ ದಿಂದ ದುಡಿದಿದ್ದಾರೆ. ಅಷ್ಟೇ ಅಲ್ಲದೆ ಈ ಶಿಕ್ಷಣ ಸಂಸ್ಥೆಗೆ ಹಲವಾರು ಶಿಕ್ಷಕರು ಕೂಡ ತಮ್ಮ ಅಮೂಲ್ಯ ಸೇವೆಯನ್ನು ಸಮರ್ಪಿಸಿದ್ದಾರೆ. ಇವರೆಲ್ಲರ ತ್ಯಾಗದ ಪ್ರತೀಕವಾದ ಬೆಥನಿ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವದ ಪ್ರಾಂತೀಯ ಉದ್ಘಾಟನಾ ಸಮಾರಂಭವನ್ನು ನಮ್ಮ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದು, ಶಾಲಾ ಸಂಚಾಲಕಿಯರಾದ ಭಗಿನಿ ಸಿಂತಿಯಾ ಸಿಕ್ವೇರಾರವರು ಸಂಸ್ಥೆಯ ಲೋಗೋವನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬೆಥನಿ ಶಿಕ್ಷಣ ಸಂಸ್ಥೆಯು ನಡೆದು ಬಂದ ದಾರಿಯನ್ನು ಮಕ್ಕಳಿಗೆ ತಿಳಿಸಿದ ಕ್ಷಣ ನಿಜಕ್ಕೂ ಅಮೋಘವಾಗಿತ್ತು. ಈ ಕಾರ್ಯಕ್ರಮವನ್ನು ಬೆಥನಿ ಪ್ರೌಢಶಾಲೆ ಹಾಗೂ ಶಿಶುವಿಹಾರ ಶಾಲೆಯ ಒಕ್ಕೂಟದಲ್ಲಿ ಆಯೋಜಿಸಲಾಗಿತ್ತು. ಎರಡು ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ ಪ್ರತಿಯೊಬ್ಬರು ಹೆಮ್ಮೆ ಪಡುವಂತಹ ಕಾರ್ಯಕ್ರಮವಾಗಿತ್ತು.
ಶ್ರೀಮತಿ ರಾಜೇಶ್ರೀ. ಕೆ, ಸಹಶಿಕ್ಷಕರು
ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಚಿತ್ತಾಪುರ