ನೋವಿನ ಪರಮಾವಧಿಯ ನರಳಾಟದಲ್ಲೂ
ಜೀವದ ರೂವಾರಿಯಾಗುವ ಜೀವ-ನದಿ
ಬದುಕಿನ ಗೆಳತಿಯ ಹುಟ್ಟು
ಗರ್ಭದಲ್ಲೇ ಸ್ರಾವವಾಗಿ ಬಿಡುತ್ತದೆ !
ಭುವಿಯ ಮೇಲೆ ನಿಂತು
ಬಾನಿಗೂ ಕೈಚಾಚಿ
ಅರಿವಿನ ಪರಿಧಿ ವಿಸ್ತರಿಸಿದರೂ
ಅಡುಗೆ ಮನೆಯ ಹೆಣ್ಣಾಗಿಯೇ ಬಿಡುತ್ತಾಳೆ !
ತಾಯಿ-ಮಗಳು, ಅಕ್ಕ-ತಂಗಿ
ಬೇಕೆನಿಸಿದಾಗಲೆಲ್ಲಾ ಮಡದಿ
ಹಲವು ಪಾತ್ರಗಳ ಸಹಗಮನ
ಬೆಂಕಿಯಲ್ಲೇ ಅರಳುತ್ತಾಳೆ !
ಕೂಡಿ ಕಳೆಯುವಾಟದಲ್ಲಿ
ಬರೇ ಕಳೆಯಾಗುತ್ತಾ
ಎಲೆಯ ತುದಿಯಲ್ಲಿ ಸರಿಸಿಟ್ಟ
ಕರಿಬೇವಾಗೇ ಉಳಿದು ಬಿಡುತ್ತಾಳೆ !
Violet Pinto,
Arsikere.