ದಾನದಲ್ಲಿ ಶ್ರೇಷ್ಠ ದಾನ ವಿದ್ಯಾದಾನ. ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ, ಕಿನ್ನಿಕಂಬಳ ಇಲ್ಲಿ ಶ್ರೀಮತಿ ಸೆವ್ರಿನ್ ಪಿಂಟೊ ಮತ್ತು ಬೆನ್ನಿಲೋಬೊ ಇವರು ಸತತವಾಗಿ 36 ವರುಷಗಳ ಸುದೀರ್ಘ ವೃತ್ತಿ ಜೀವನವನ್ನು ತೃಪ್ತಿಯಿಂದ ಪೂರೈಸಿ ನಿವೃತ್ತಿಯಾಗುವ ಸಂಧರ್ಭದಲ್ಲಿ ದಿನಾಂಕ 18.01.2020 ರಂದು ಶಾಲಾ ಆಡಳಿತ ಮಂಡಳಿಯ ಪರವಾಗಿಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಮಂಗಳೂರು ಪ್ರಾಂತೀಯ ಮುಖ್ಯಸ್ಥೆಯ ಸಲಹೆದಾರರು ಹಾಗೂ ಶಿಕ್ಷಣ ಸಂಯೋಜಕರಾದ ವಂ.ಭ. ಸಿ.ಮರಿಯೋಲಾರವರು ವಹಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಕನ್ಯಾಮಠದ ಮುಖ್ಯಸ್ಥೆ ವಂ.ಭ. ಸಿ.ಜೂಲಿಯಾನ ಮೋನಿಸ್, ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕರಾದ ವಂ.ಭ ಮಾರಿಬೆಲ್‌ರವರು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ವಂ.ಭ.ಲಿಲ್ಲಿಯವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ವಿದ್ಯಾರ್ಥಿಗಳಿಂದ ಪ್ರಾರ್ಥನಾ ವಿದಿಯೊಂದಿಗೆ ಪ್ರಾರ್ಥನಾ ನೃತ್ಯ ನಡೆಯಿತು. ನಿವೃತ್ತ ಶಿಕ್ಷಕರನ್ನು ಆಡಳಿತ ಮಂಡಳಿ, ಶಾಲೆ, ರಕ್ಷಕ- ಶಿಕ್ಷಕ ಸಂಘ, ಹಾಗೂ ವಿದ್ಯಾರ್ಥಿಗಳ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ, ಶುಭಹಾರೈಸಲಾಯಿತು. ನಿವೃತ್ತ ಶಿಕ್ಷಕರು ವೃತ್ತಿಜೀವನದ ಮೆಲುಕುಗಳನ್ನು ಹಂಚಿಕೊಂಡರು. ಅಧ್ಯಕ್ಷರು ನಿವೃತ್ತ ಶಿಕ್ಷಕರ ಗುಣಗಾನ ಮಾಡಿ ಮುಂದಿನ ಬದುಕಿಗೆ ಶುಭ ಕೋರಿದರು.
ಶಾಲಾ ವಿದ್ಯಾಥಿಗಳೊಂದಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಸಹ ಸಂಸ್ಥೆಗಳ ಪ್ರತಿನಿಧಿಗಳು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದರ
ಲೀನಾ, ಸಹಾಯಕ ಶಿಕ್ಷಕಿ
ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ, ಕಿನ್ನಿಕಂಬಳ