ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಡೋರ್ನಹಳ್ಳಿಯ ಸಂತ ರೀತಮ್ಮನವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 35 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದ ಸಹ-ಶಿಕ್ಷಕಿ ಶ್ರೀಮತಿ ‘ಸಮ್ಮನ್ಸ್ ಮೇರಿ’ ರವರ ಮುಂದಿನ ಜೀವನ ಸುಖವಾಗಿರಲಿ ಎಂದು ಹಾರೈಸಿ ದಿನಾಂಕ 13-02-2021ರಂದು ಶಾಲಾ ಸಭಾಂಗಣದಲ್ಲಿ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸನ್ಮಾನಿತರು ಮಾತನಾಡಿ 35 ವರ್ಷಗಳ ಕಾಲ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಬೆಥನಿ ಸಂಸ್ಥೆಗೆ ಹಾಗೂ ಎಲ್ಲಾ ಭಗಿನಿಯರಿಗೆ ಕೃತಜ್ಞತೆಯ ನುಡಿಗಳನ್ನು ಸಮರ್ಪಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಥನಿ ಸಂಸ್ಥೆಯ ಬೆಂಗಳೂರು ಪ್ರಾಂತ್ಯದ ಪ್ರಾಂತ್ಯಧಿಕಾರಿಣಿ ಪೂಜ್ಯ ಸಿಸ್ಟರ್ ಸಹನಾರವರು ಮಾತನಾಡಿ ತಮ್ಮ ನಿಸ್ವಾರ್ಥಸೇವೆ ಹಾಗೂ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಪಡೆದ ಇವರ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಂತ ಅಂತೋಣಿ ದೇವಾಲಯದ ಪ್ರಧಾನ ಯಾಜಕರು ಫಾದರ್ ಎನ್.ಟಿ ಜೋಸೆಫ್ ರವರು, ಪಲ್ಲೋಟಿ ಶಾಂತಿಧಾಮದ ಗುರುಗಳಾದ ಅರುಣ್‍ರಾಯಪ್ಪ, ಸಿಸ್ಟರ್ ವಿನ್ನಿಫ್ರೆಡ್, ಮುಖ್ಯಶಿಕ್ಷಕರಾದ ಸಿಸ್ಟರ್ ಸವಿತಾರವರು, ಸಿ.ಆರ್.ಪಿ ಮಂಜೇಗೌಡರವರು, ಗ್ರಾ,ಪಂ ಸದಸ್ಯರಾದ ಚೌರಪ್ಪನವರು, ಶಾಲಾ ಸಂಚಾಲಕಿಯರಾದ ಸಿಸ್ಟರ್ ಅನಿಲ್ ರವರು ಪಾತಿಮಾ ಕಾನ್ವೆಂಟ್‍ನ ಎಲ್ಲಾ ಭಗಿನಿಯರು, ಕೆ.ಆರ್.ನಗರದ ಸಂತ ಜೋಸೆಫ್ ಕಾನ್ವೆಂಟ್‍ನ ಎಲ್ಲಾ ಭಗಿನಿಯರು, ಶಾಲೆಯ ಎಲ್ಲಾಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ಮೇರಿ ಎಲಿಜಬೆತ್ ನಿರೂಪಣೆಯೊಂದಿಗೆ, ಕುಮಾರಸ್ವಾಮಿ ಸ್ವಾಗತಿಸಿದರು , ಟಿ.ಕೆ ಮೋಹನ್ ಕುಮಾರ್ ವಂದಿಸಿದರು.
ಸಿಸ್ಟರ್ ಸವಿತಾ, ಮುಖ್ಯಶಿಕ್ಷಕಿ
ಸಂತ ರೀತಮ್ಮನವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಡೋರ್ನಹಳ್ಳಿ