41 ವರ್ಷಗಳ ಕಾಲ ವಿದ್ಯಾರ್ಥಿಗಳನ್ನು ಮುಂದಿನ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಶ್ರೀಮತಿ ಆಲಿಸ್ ಡಿಸೋಜಾರವರ ಸನ್ಮಾನ – ವಿದಾಯ ಸಮಾರಂಭವು ದಿನಾಂಕ 01.04.2023 ರಂದು ಅದ್ದೂರಿಯಾಗಿ ನೆರವೇರಿತು.
ಈ ವಿಶೇಷ ಕಾರ್ಯಕ್ರಮದ ಅಧ್ಯಕ್ಷರಾಗಿ ಬೆಥನಿ ಮಂಗಳೂರು ಪ್ರಾಂತೀಯ ಶಿಕ್ಷಣ ಸಂಯೋಜಕರಾಗಿರುವ ವಂ! ಭ! ಶುಭಾರವರು ಆಗಮಿಸಿ, ನಿವೃತ್ತ ಶಿಕ್ಷಕರ ಗುಣಗಾನ ಮಾಡಿ ಶುಭ ಹಾರೈಸಿದರು.
ಮೊದಲಿಗೆ ಪುಷ್ಪ, ಪನ್ನೀರು, ಕುಂಕುಮ ಮತ್ತು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬಳಿಕ ಪ್ರಾರ್ಥನಾ ವಿಧಿಯನ್ನು ನೆರವೇರಿಸಲಾಯಿತು, ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರಾದ ವಂ!ಭ! ಗ್ರೇಸಿ, ಶಾಲಾ ಮ್ಯಾನೇಜರ್ ವಂ!ಭ! ಲೀರಾ ರವರು ಶುಭ ಹಾರೈಸಿದರು. ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷೆ ಗೀತಾ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಶುಭ ಹಾರೈಸಿದರು. ಎಲ್ಲಾ ಅತಿಥಿ ಗಣ್ಯರಿಂದ ಶಾಲು ಹೊದಿಸಿ, ಫಲ ಪುಷ್ಪ ನೀಡಿ, ಕಿರು ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕಿ ತಮ್ಮ ವೃತ್ತಿ ಜೀವನದ ನೆನಪುಗಳನ್ನು ಮೆಲುಕು ಹಾಕಿ ಎಲ್ಲರನ್ನು ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಂ!ಭ! ಲಿಲ್ಲಿ ಇವರ ಹಿರಿತನದಲ್ಲಿ ಈ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು. 450 ವಿದ್ಯಾರ್ಥಿಗಳು ಅಹ್ವಾನಿತ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.
ಲೀನಾ ಲಿಲ್ಲಿ ಪಿಂಟೊ, ಸಹ ಶಿಕ್ಷಕಿ
ರೋಸಾ ಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆ, ಕಿನ್ನಿಕಂಬಳ