ಶ್ರೀಮತಿ ವೆರೋನಿಕಾ ಗೋವಿಯಸ್ ರವರು ಕ್ಯಾಥೋಲಿಕ್ ಬೋರ್ಡ್ ಹಾಗೂ ಬೆಥನಿ ವಿದ್ಯಾ ಸಂಸ್ಥೆಗಳ ಹಲವು ಶಾಲೆಗಳಲ್ಲಿ 41 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋನಿವೃತ್ತಿಯನ್ನು ಜುಲೈ 4 ರಂದು ಬೀಳ್ಕೊಡಲಾಯಿತು. ವಾದ್ಯ ಮೇಳದೊಂದಿಗೆ ವಿದ್ಯಾರ್ಥಿಗಳ ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಕೊಂಡರು. ಸತ್ಯ, ಪ್ರೀತಿ, ನ್ಯಾಯ ಮತ್ತು ಶಾಂತಿ ಸಂದೇಶವುಳ್ಳ ಕಾರ್ಯಕ್ರಮವು ನೃತ್ಯದೊಂದಿಗೆ ಪ್ರಾರಂಭವಾಯಿತು.
ಬೆಥನಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಭಗಿನಿ ಸಂಧ್ಯಾ ಬಿ ಎಸ್, ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯನಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು, ಸನ್ಮಾನಿತರ ಕುಟುಂಬದವರು, ಉದ್ಯೋಗಿ ಬಂಧುಗಳು ಬೋಳಾರ ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಅನಿತಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇವರ ವೃತ್ತಿನಿಷ್ಠೆ, ನಿಸ್ವಾರ್ಥ ಸೇವೆ, ಮಕ್ಕಳ ಮೇಲಿನ ಮಮತೆ, ಪ್ರೀತಿ, ಆಡಳಿತ ಮಂಡಳಿಯ ಮೇಲಿರುವ ವಿಶ್ವಾಸ, ಅಚಲಭಕ್ತಿ, ಏಕಾಗ್ರತೆ, ನಯ, ನಾಜೂಕುತನ, ಸಮಯ ಮುಕ್ತ ಕಂಠದಿಂದ ಅಧ್ಯಕ್ಷರು ಶ್ಲಾಘಿಸಿದರು. ಅವರ ಸೇವೆಯನ್ನು ಹೃದಯ ಅಂತರಾಳದಿಂದ ಸ್ಮರಿಸಿ ಮುಂದಿನ ಜೀವನವೂ ಸುಖಮಯವಾಗಲಿ ಎಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಶಾಲಾ ಸಂಚಾಲಕಿ ಭಗಿನಿ ಶೈಲಾ ಹಾಗೂ ಮುಖ್ಯೋಪಾಧ್ಯಾಯನೀ ಭಗಿನಿ ವೀಣಾ ಬೆಥನಿ ಎಜುಕೇಶನ್ ಸೊಸೈಟಿ ಪರವಾಗಿ ಸನ್ಮಾನ ಪತ್ರ ವಾಚಿಸಿದರು ಶಿಕ್ಷಕಿ ತಮ್ಮ 40 ವರ್ಷಗಳ ಸೇವಾವಧಿ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಮಕ್ಕಳು ಓದಿನ ಕಡೆಗೆ ಹೆಚ್ಚಿನ ಗಮನಕೊಟ್ಟು ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಬೇಕು ಎಂಬ ಕಿವಿಮಾತನ್ನು ನೀಡಿದರು.
ಸಿಸ್ಟರ್ ವೀಣಾ, ಮುಖ್ಯೋಪಾಧ್ಯಾಯನಿ
ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ, ಕಂಕನಾಡಿ