ಸೈಂಟ್ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೆಂದೂರು ಇಲ್ಲಿಯ ಮುಖ್ಯೋಪಾಧ್ಯಾಯಿನಿ ಭಗಿನಿ ನ್ಯಾನ್ಸಿಯವರು ದಿನಾಂಕ 31.03.2024 ರಂದು ತಮ್ಮ 35 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತರಾದರು.
ಸಿಸ್ಟರ್ ನ್ಯಾನ್ಸಿಯವರು ತಮ್ಮ ಸೇವಾವಧಿಯಲ್ಲಿ ಸಾವಿರಾರು ಬಡವಿದ್ಯಾರ್ಥಿಗಳಿಗೆ ಮಾತೃಸ್ವರೂಪರಾಗಿ ಪ್ರೀತಿ ಮಮತೆಯನ್ನು ಧಾರೆಯೆರೆದು, ನಿಸ್ವಾರ್ಥ ಮನೋಭಾವನೆಯಿಂದ ವಿದ್ಯಾರ್ಜನೆಯನ್ನು ನೀಡಿರುವರು. ಉತ್ತಮ ಆಡಳಿತವನ್ನು ನಡೆಸಿ, ಶಾಲೆಯನ್ನು ಪ್ರಗತಿಪಥದತ್ತ ಮುನ್ನೆಡೆಸಿದ ಕೀರ್ತಿಗೆ ಪಾತ್ರರಾಗಿರುವರು.
ಬೆಥನಿ ವಿದ್ಯಾಸಂಸ್ಥೆಯ ಕಾರ್ಯಾದರ್ಶಿ ಭಗಿನಿ ಸಂಧ್ಯಾರವರ ಅಧ್ಯಕ್ಷತೆಯಲ್ಲಿ ಕಾರ್ಯಾಕ್ರಮವು ಯಶಸ್ವಿಯಾಗಿ ನಡೆಸಲ್ಪಟ್ಟಿತು. ಅಧ್ಯಕ್ಷರು, ಭಗಿನಿ ನಾನ್ಸಿಯವರಿಗೆ ಶಾಲು ಹೊದಿಸಿ, ಹೂಹಾರ ಹಾಕಿ, ಫಲಪುಷ್ಪ, ಸನ್ಮಾನಪತ್ರ ನೀಡಿ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಭಗಿನಿ ಶೈಲ, ಬೆಥನಿ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಶುಭ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಾ. ಇ.ಗಿ.S. ಮಾಬೆನ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ, ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿ ಬಳಗ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀಮತಿ ಬಿ ಡಿಸೋಜ, ಪ್ರಭಾರ ಮುಖ್ಯೋಪಾಧ್ಯಾಯಿನಿ
ಸೈಂಟ್ ಸೆಬಾಸ್ಟಿಯನ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಂದೂರು