ಹಣ್ಣೆಳೆ ಉದುರಿ ಚಿಗುರೆಳೆ ಬೆಳೆಯುವುದು ಪ್ರಕೃತಿಯ ನಿಯಮ. ಹಾಗೆಯೇ ನಮ್ಮ ಶಾಲೆಗೆ ಶ್ರೀಮತಿ ಲೀನಾ ಲಿಲ್ಲಿ ಪಿಂಟೊರವರು ಚಿಗುರುಳೆಯಾಗಿ ತಮ್ಮ ಶಿಕ್ಷಕಿ ಸೇವೆಗೆ ಸೇರಿದ್ದು ಸತತ 42 ವರ್ಷಗಳ ಕಾಲ ಇದೇ ಬೆಥನಿ ಆಡಳಿತ ಮಂಡಳಿಯ ಸಂಸ್ಥೆಯಾಗಿರುವ ರೋಸಾ ಮಿಸ್ತಿಕಾ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿ, ಇವತ್ತು ಹಣ್ಣಳೆಯಾಗಿ ಈ ಸಂಸ್ಥೆಯಿಂದ ಉದುರಿ ಹೋಗುವ ದಿನವಾಗಿದೆ. ಅವರು ಇಂದು ವಯೋ ನಿವೃತ್ತಿಯನ್ನು ಹೊಂದಿದ್ದಾರೆ. ಅವರ ಸಮಾರೋಪ ಸಮಾರಂಭ ಕಾರ್ಯಕ್ರಮವು ದಿನಾಂಕ 09.07.2024 ರಂದು ನಡೆಸಲಾಯಿತು. ವಿದ್ಯಾರ್ಥಿಗಳ ಸಾಲು ತಂಡಗಳೊಂದಿಗೆ ಲೀನಾ ಟೀಚರ್ ಹಾಗೂ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನೃತ್ಯದ ಮೂಲಕ ದೇವರ ಆಶೀರ್ವಾದವನ್ನು ಪಡೆದು ಕಾರ್ಯಕ್ರಮಕ್ಕೆ ಆಶೀರ್ವಾದವನ್ನು ಬೇಡಲಾಯಿತು. ವಿದ್ಯಾರ್ಥಿಗಳು ಸ್ವಾಗತ ನೃತ್ಯದ ಮೂಲಕ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಣದ ಕೆಲವೊಂದು ತುಣುಕುಗಳ ಮೂಲಕ ಅಭಿನಯಿಸಿ ಗುರುವಂದನೆ ನೃತ್ಯವನ್ನು ಮಾಡಿ ಶಿಕ್ಷಕಿಗೆ ಗೌರವ ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭ. ಲಿಲ್ಲಿ ಡಿಸೋಜರವರು ನೆರೆದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಬೆಥನಿ ಆಡಳಿತ ಮಂಡಳಿಯ ವತಿಯಿಂದ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ವ. ಭ.ಡಾ ಮಾರಿಯೋಲಾ ಬಿ.ಎಸ್, ಶಾಲಾ ಸಂಚಾಲಕಿ, ಸ್ಥಳೀಯ ಕಾನ್ವೆಂಟಿನ ಸುಪೀರಿಯರ್, ಮುಖ್ಯೋಪಾಧ್ಯಾಯಿನಿ, ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷೆ, ಹಾಗೂ ಸನ್ಮಾನಿತರ ಕುಟುಂಬದವರು ಉಪಸ್ಥಿತರಿದ್ದರು. ಇವರ ನಿಸ್ವಾರ್ಥ ಸೇವೆ, ಸಂಸ್ಥೆಯ ಬಗೆಗಿನ ಅಭಿಮಾನ ಮಕ್ಕಳ ಮೇಲಿನ ಪ್ರೀತಿ, ಕಾಳಜಿ, ಸಮಯ ಪ್ರಜ್ಞೆ, ಇವೆಲ್ಲವನ್ನು ಮೆಲುಕು ಹಾಕಿ ಅಧ್ಯಕ್ಞರು ಅಭಿನಂದಿಸಿದರು. ಅವರ ಸೇವೆಯನ್ನು ಸ್ಮರಿಸಿ, ಅವರ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಮನತುಂಬಿ ಹಾರೈಸಿ ಬೀಳ್ಕೊಟ್ಟರು.
ಶಾಲಾ ಸಂಚಾಲಕಿ ಭ.ರೋಸ್‍ಲೀಟಾ ಬಿ.ಎಸ್ ಬೆಥನಿ ಎಜ್ಯುಕೇಶನ್ ಸೊಸೈಟಿಯ ಪರವಾಗಿ ಸನ್ಮಾನ ಪತ್ರ ವಾಚಿಸಿದರು. ವಂ.ಭ ನವನೀತರವರು ಶಿಕ್ಷಕಿಯ ಕುರಿತು ಎಲ್ಲಾ ಶಿಕ್ಷಕರ ಪರವಾಗಿ ತಮ್ಮ ಬಾಂಧವ್ಯವನ್ನು ಅನಿಸಿಕೆಯ ಮೂಲಕ ವ್ಯಕ್ತಪಡಿಸಿದರು ಹಾಗೂ ವಿದ್ಯಾರ್ಥಿಗಳ ಪರವಾಗಿ ಶಾಲಾ ನಾಯಕಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದಳು. ಶಿಕ್ಷಕಿ ತಮ್ಮ 42 ವರ್ಷಗಳ ಸೇವೆಯ ಸವಿ ನೆನಪುಗಳನ್ನು ನೆನೆದು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಮತಿ ಸುಶ್ಮಿತಾ, ಸಹಶಿಕ್ಷಕಿ
ರೋಸಾ ಮಿಸ್ತಿಕಾ ಶಾಲೆ ಕಿನ್ನಿಕಂಬಳ