ಧಾರವಾಡದ, ಪ್ರಸೆಂಟೇಶನ್ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಮತ್ತು ಜಿಮ್ನ್ಯಾಸ್ಟಿಕ್ ಪಂದ್ಯಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. 17 ವಯೋಮಿತಿಯ ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯದಲ್ಲಿ, ವಿದ್ಯಾರ್ಥಿನಿಯಾದ ಕು. ವಿಜಯಲಕ್ಷ್ಮೀ ಬೆಂಗೇರಿ ಮತ್ತು 17 ವಯೋಮಿತಿಯ ಬಾಲಕಿಯರ ಜಿಮ್ನ್ಯಾಸ್ಟಿಕ್ ಪಂದ್ಯದಲ್ಲಿ ಕು.ಅಶ್ವಿನಿ.ಪಾಟೀಲ, ಕು.ರೀತಿಕಾ ಗಣಾಚಾರಿ, ಕು.ಅನು ಮುತ್ತಗಿ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಕ್ರೀಡಾಪಟುಗಳಿಗೆ, ಮುಖ್ಯೋಪಾಧ್ಯಾಯಿನಿಯರಾದ ಭಗಿನಿ. ಸ್ಯಾಲಿ ಬಿ ಎಸ್ , ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ಆಡಳಿತ ಮಂಡಳಿಯು ಅಭಿನಂದಿಸಿದೆ.
ಡ್ಯಾನಿಯಲ್ ಕುಮಾರ
ದೈಹಿಕ ಶಿಕ್ಷಕರು
ಪ್ರಸೆಂಟೇಷನ್ ಬಾಲಕಿಯರ ಪ್ರೌಢ ಶಾಲೆ,
ಧಾರವಾಡ.