ವಲಯ ಮಟ್ಟದ ಕ್ರೀಡಾಕೂಟ: - ಕ್ರೀಡಾ ಕೂಟದ ಗುಂಪು ಆಟಗಳಲ್ಲಿ ವಾಲಿಬಾಲ್ ಬಾಲಕರು-ಬಾಲಕಿಯರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕರ ಖೋ-ಖೋ ದ್ವಿತೀಯ ಸ್ಥಾನ ಪಡೆದಿದೆ. ಇನ್ನು ವೈಯಕ್ತಿಕ ಕ್ರೀಡೆಯಲ್ಲಿ 100ಮೀ ಓಟದಲ್ಲಿ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, 4 x 100 ರಿಲೇಯಲ್ಲಿ ಪ್ರಥಮ ಸ್ಥಾನ ಬಾಲಕಿಯರ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕು ಮಟ್ಟ ಕ್ರೀಡಾಕೂಟ :- ತಾಲೂಕ ಮಟ್ಟದ ಕ್ರೀಡಾಕೂಟದ ಗುಂಪು ಆಟಗಳಲ್ಲಿ ಬಾಲಕಿಯರು ವಾಲಿಬಾಲ್‍ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರು ವಾಲಿಬಾಲ್‍ನಲ್ಲಿ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.

ದಸರಾ ಕ್ರೀಡಾ ಕೂಟ :- ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಬಾಲಕಿಯರ ವಾಲಿಬಾಲ್ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಅತ್ಯಂತ ಉತ್ತಮ ಆಟವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ ಇಲ್ಲಿಯ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್.ಕವಿತಾ ಬಿ ಎಸ್ ಹಾಗೂ ಶಿಕ್ಷಕ-ಶಿಕ್ಷಕೇತರರ ಸಿಬ್ಬಂದಿ ವರ್ಗದವರ ಪೆÇ್ರೀತ್ಸಾಹದಿಂದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಹಾಗೂ ಸತತ ಪ್ರಯತ್ನದಿಂದ ಕ್ರೀಡಾಕೂಟದಲ್ಲಿ ಸ್ಥಾನ ಗಳಿಸಲು ಸಾಧ್ಯವಾಯಿತು. ಈ ಎಲ್ಲಾ ವಿದ್ರ್ಯಾಥಿಗಳಿಗೆ ಶಾಲಾ ಪರವಾಗಿ ಅಭಿನಂದನೆಗಳು.

                                          

 

ವಿಶ್ವನಾಥ ಕುಂಬಾರ, ದೈಹಿಕ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

Home | About | NewsSitemap | Contact Us

Copyright © 2016-2024 - www.besmangalore.org . Powered by eCreators

Contact us

Bethany Educational Society®
Bethany Convent
Bendur, Mangalore-575002
D.K. Dist, Karnataka State

E-mail : [email protected]