ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರಸೀಕೆರೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ಬಾಲಕಿಯ ವಿಭಾಗದಲ್ಲಿ ಪುತ್ತೂರು ತಾಲೂಕಿನ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಕಳೆದ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಿಂದ ಓರ್ವ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ಬಾರಿ ಶಾಲಾ ಪೂರ್ಣ ತಂಡವು ಪ್ರಥಮವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳಾದ ಜುಏನ್ನಾ ಡ್ಯಾಝಲ್ ಕುಟಿನ್ಹಾ, ಸನ್ನಿಧಿ, ಹಾರ್ದಿಕಾ, ಧನ್ವಿ, ಜಶ್ಮಿತಾ, ಸುಶ್ರಾವ್ಯ, ವಿಜೇತ, ಹರ್ಷಿಣಿ, ದೀಕ್ಷಾ, ಶಾಹಿದಾ, ಲಕ್ಷ್ಯ, ದರ್ಶಿಣಿ, ಗಗನ, ಜೆನಿಟ ಸಿಂಧು ಪಸನ್ನ ಹಾಗೂ ಕೃತಿಕಾ ತಂಡದಲ್ಲಿದ್ದರು. ಭಗಿನಿ ಪ್ರಶಾಂತಿ ಬಿ ಎಸ್ ಇವರ ಪೆÇ್ರೀತ್ಸಾಹ, ಮುಖ್ಯೋಪಾಧ್ಯಾಯಿನಿ ಭಗಿನಿ ವೆನಿಶಾ ಬಿಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕ ಬಾಲಕೃಷ್ಣ ರೈ ಪೆÇರ್ದಾಲ್ ಹಾಗೂ ಮಹಮ್ಮದ್ ಹಬೀಬ್, ಶಿಲ್ಪಾ ಡಿಸೋಜ, ಸುಚೇತ್ ದುರ್ಗಾನಗರ ತರಬೇತಿ ನೀಡಿರುತ್ತಾರೆ.
ಭಗಿನಿ ವೆನಿಶಾ ಬಿಎಸ್, ಮುಖ್ಯೋಪಾಧ್ಯಾಯಿನಿ
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರು, ದರ್ಬೆ